ಕೊಲ್ಲೂರು : ದಿನಾಂಕ 18/06/2024 (ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಳ್ಳುತ್ತಿದ್ದ ಈರ್ವರನ್ನು ಕೊಲ್ಲೂರು ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಜಯಶ್ರಿ ಹುನ್ನೂರ ಅವರು ಬಂಧಿಸಿದ್ದಾರೆ.
ಕೊಲ್ಲೂರು ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಜಯಶ್ರೀ ಹುನ್ನೂರ ಅವರು ದಿನಾಂಕ:17-06-2024 ರಂದು ಸಿಬ್ಬಂದಿಯವರೊಂದಿಗೆ ಕೊಲ್ಲೂರು ಜಂಕ್ಷನ್ ಬಳಿ ರೌಂಡ್ಸ್ ನಲ್ಲಿರುವಾಗ, ಬೈಂದೂರು ತಾಲೂಕು, ಕೊಲ್ಲೂರು ಗ್ರಾಮದ ಕೊಲ್ಲೂರು ಶಿವಮೊಗ್ಗ NH 766 C ರಸ್ತೆಯ ಯಮುನಾ ಲಾಡ್ಜ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಕೈಗಳಿಂದ ದೂಡಾಡಿಕೊಂಡು ಜಗಳವಾಡುತ್ತ ಮತ್ತು ಜೋರಾಗಿ ಅವಾಚ್ಯ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಗಲಾಟೆ ಮಾಡುತ್ತಿರುವುದಾಗಿ ಮಾಹಿತಿ ದೊರೆತ ಮೇರೆಗೆ ಕೂಡಲೇ ಅಲ್ಲಿಗೆ ತೆರಳಿ ಅಲ್ಲಿ ಗಲಾಟೆ ಮಾಡುತ್ತಿದ್ದ ಆಪಾದಿತರಾದ 1) ಪ್ರವೀಣ್ ಪ್ರಾಯ 25 ವರ್ಷ, ಹೊಸನಗರ ತಾಲೂಕು, 2) ಹೇಮಂತ ಕುಮಾರ್ ಪ್ರಾಯ 26 ವರ್ಷ ಕುಂದಾಪುರ ಎಂಬವರನ್ನು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡಿರುವ ಕಾರಣಕ್ಕೆ ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಆಪಾದಿತರು ಪ್ರವಾಸಿಗಳನ್ನು ಲಾಡ್ಜ್ ಗೆ ಬಾಡಿಗೆಗೆ ಕರೆಯುವ ವಿಚಾರಕ್ಕೆ ಪರಸ್ಪರ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ: 160 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.