Spread the love

ಬೈಂದೂರು:  ದಿನಾಂಕ: 18-06-2024(ಹಾಯ್ ಉಡುಪಿ ನ್ಯೂಸ್) ಶಿರೂರು ಕಡೆಯಿಂದ ಬೈಂದೂರು ಕಡೆಗೆ ಜಾನುವಾರುಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ವಾಹನವನ್ನು ಬೈಂದೂರು ಪೊಲೀಸ್‌ ಠಾಣೆಯ ಉಪನಿರೀಕ್ಷಕರಾದ ತಿಮ್ಮೇಶ್.ಬಿ.ಎನ್ ಅವರು ವಶಪಡಿಸಿಕೊಂಡಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿ.ಎನ್ ಅವರು ದಿನಾಂಕ 17-06-2024 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ರಾತ್ರಿ 1.30 ಗಂಟೆಗೆ ಟಾಟಾ ಎಸ್ ವಾಹನದಲ್ಲಿ  ಜಾನುವಾರನ್ನು  ತುಂಬಿಕೊಂಡು ಶಿರೂರು ಕಡೆಯಿಂದ  ಬೈಂದೂರು ಕಡೆಗೆ ಬರುತ್ತಿರುವುದಾಗಿ ಖಚಿತ  ಮಾಹಿತಿ ಬಂದಂತೆ ಕೂಡಲೇ  ಸಿಬ್ಬಂದಿಯವರೊಂದಿಗೆ  ಇಲಾಖೆಯ ಜೀಪಿನಲ್ಲಿ  ಶಿರೂರು ಪೇಟೆ ಬಳಿ  ಬಂದು  ಶಿರೂರು ಕೆಳಪೇಟೆ ಬಳಿ ತಲುಪಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ  ಸಿಬ್ಬಂದಿಗಳೊಂದಿಗೆ  ವಾಹನ ತಪಾಸಣೆ ಮಾಡುತ್ತಿದ್ದರು ಎಂದಿದ್ದಾರೆ .

ರಾತ್ರಿ 1:45 ಗಂಟೆಯ ಸುಮಾರಿಗೆ ಶೀರೂರು ಮೇಲ್ ಪೇಟೆ ಕಡೆಯಿಂದ  ಕೆಳಪೇಟೆ ಕಡೆಗೆ ಒಂದು ಟಾಟಾ ಎಸ್ ವಾಹನವು ಬರುತ್ತಿದ್ದು ವಾಹನ ತಪಾಸಣೆ ಮಾಡಲು ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕನು ವಾಹನವನ್ನು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದು,  ಕೂಡಲೇ  ಪೊಲೀಸರು ಟಾಟಾ ಎಸ್ ವಾಹನವನ್ನು ಜೀಪಿನಲ್ಲಿ ಬೆನ್ನಟ್ಟಿ ಕೊಂಡು    ಮೊಮಿನ್ ಮೊಹಲ್ಲಾ ಬಳಿ ತಡೆದು ನಿಲ್ಲಿಸಿದಾಗ ಟಾಟಾ ಎಸ್ ವಾಹನದ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಯು ವಾಹನವನ್ನು ಬಿಟ್ಟು ಪರಾರಿಯಾಗಿದ್ದು, ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ವಾಹನವು ಟಾಟಾ  ಕಂಪೆನಿಯ ಟಾಟಾ ಎಸ್  ಗೂಡ್ಸ್ ಕಪ್ಪು ಮತ್ತು  ಹಳದಿ ಬಣ್ಣದ ವಾಹನವಾಗಿದ್ದು,  ಅದರ  ನೊಂದಣಿ ಸಂಖ್ಯೆ    ಕೆಎ 41 ಬಿ 5739  ಆಗಿರುತ್ತದೆ ಎನ್ನಲಾಗಿದೆ.

ವಾಹನದ ಹಿಂಬದಿಯ ಬಾಡಿಯಲ್ಲಿ ಒಂದು ಕಪ್ಪು ಮತ್ತು ಬಿಳಿ ಬಣ್ಣದ ಎತ್ತನ್ನು ಹಿಂಸಾತ್ಮಕವಾಗಿ  ಹಳದಿ ನೈಲಾನ್ ಹಗ್ಗದಿಂದ ಕೈಕಾಲುಗಳನ್ನು ಕಟ್ಟಿ ಹಾಕಿತುಂಬಿರುವುದು ಕಂಡು ಬಂದಿರುತ್ತದೆ ಎಂದಿದ್ದಾರೆ .ಅದರ ಅಂದಾಜು ಮೌಲ್ಯ 10,000/- ರೂಪಾಯಿ ಹಾಗೂ ವಾಹನದ  ಅಂದಾಜು ಮೌಲ್ಯ 3,00,000/- ರೂಪಾಯಿ  ಆಗಿದ್ದು, ಆರೋಪಿತರು ಅಕ್ರಮವಾಗಿ ಹಣ ಮಾಡುವ ಉದ್ದೇಶದಿಂದ ಜಾನುವಾರನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದು ಜಾನುವಾರು ವಧೆ ಮಾಡಲು ಯಾವುದೇ ಪರವಾನಗಿ ಹೊಂದದೇ ಕೆಎ 41 ಬಿ 5739 ಟಾಟಾಎಸ್ ಗೂಡ್ಸ್ ವಾಹನದಲ್ಲಿತುಂಬಿಸಿಕೊಂಡು ಅಕ್ರಮವಾಗಿ  ಸಾಗಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ ಎಂದು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 379 ಐಪಿಸಿ ಮತ್ತು ಕಲಂ: 4,5,7,12 Karnataka Prevention of Slaughter & prevention of cattle ordinance 2020 & U/s 11(1) (D)  ,Prevention of cruelty to Animals  Act 1960  And 66 R/w 192 (A)   IMV  Act ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!