Spread the love

ಶಂಕರನಾರಾಯಣ: ದಿನಾಂಕ: 17-06-2024(ಹಾಯ್ ಉಡುಪಿ ನ್ಯೂಸ್) ಕಮಲಶಿಲೆ ದೇವಸ್ಥಾನದ ಗೋಶಾಲೆ ಯಲ್ಲಿ ರಾತ್ರಿ ದನಗಳ ಕಳ್ಳತನ ಪ್ರಯತ್ನ ನಡೆದಿದೆ ಎಂದು ಪ್ರಕರಣ ದಾಖಲಾಗಿದೆ.

ಕೊರವಾಡಿ ನಿವಾಸಿ ರಾಜು (53) ಎಂಬವರು ಕಮಲಶಿಲೆ ದೇವಸ್ಥಾನದಲ್ಲಿ ರಾತ್ರಿ ಸೆಕ್ಯೂರಿ ಗಾರ್ಡ್ ಕರ್ತವ್ಯದಲ್ಲಿ ಇರುವಾಗ ಕುಂದಾಪುರ ತಾಲೂಕು ಕಮಲಶಿಲೆ ಗ್ರಾಮದ ಶ್ರೀಬ್ರಾಹ್ಮಿ ದುರ್ಗಾಪರಮೇಶ್ವರಿ ಗೋಶಾಲೆ ಕಮಲಶಿಲೆಯ ಬಳಿ ದಿನಾಂಕ 16/06/2024 ರಂದು ಬೆಳಗ್ಗಿನ ಜಾವ 02:30 ಗಂಟೆಗೆ ರಾಜುರವರಿಗೆ ಕಮಲಶಿಲೆ ದೇವಸ್ಥಾನದ ಮೆನೇಜರ್ ಗುರುಭಟ್ ರವರು ದೂರವಾಣಿ ಕರೆ ಮಾಡಿ ನಮ್ಮ ಕಮಲಶಿಲೆ ದೇವಸ್ಥಾನ ಗೋಶಾಲೆಯ ಬಳಿ ಯಾರೋ ದನಕಳವು ಮಾಡಲು ಬಂದಿರುವುದಾಗಿ ಕುಂದಾಪುರದ ಸಿಸಿಟಿವಿ ಮೇಲ್ವಿಚಾರಕರಾದ ಸೈನ್ ಇನ್ ಸೆಕ್ಯೂರಿಟಿಯವರು ತಿಳಿಸಿದ್ದು ಕೂಡಲೇ ರಾಜುರವರು ಮತ್ತು ದೇವಸ್ಥಾನದಲ್ಲಿದ್ದ ನಂದಿ, ಹರೀಶ್ ಹಾಗೂ ವೆಂಕಟೇಶ್ ಎಂಬವರೊಂದಿಗೆ ಗೋಶಾಲೆ ಬಳಿ 02:45 ಗಂಟೆಗೆ ಹೋದಾಗ ಇಬ್ಬರು ವ್ಯಕ್ತಿಗಳು ಕಾರಿನ ಬಳಿ ನಿಂತಿದ್ದು ನೋಡಿ ರಾಜುರವರು ಮತ್ತು ಜೊತೆಯಲ್ಲಿರುವವರು ಒಟ್ಟಾಗಿ ಕೂಗಿದಾಗ ಅ ವ್ಯಕ್ತಿಗಳು ಅದೇ ಕಾರಿನಲ್ಲಿ ಓಡಿ ಹೋಗಿದ್ದು ಅ ವ್ಯಕ್ತಿಗಳು ಕಾರಿನಲ್ಲಿ ದನ ಕಳವು ಮಾಡುವ ಉದ್ದೇಶದಿಂದ ಬಂದಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ  ಕಲಂ: 379, 511, 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!