Spread the love

ಕಾರ್ಕಳ: ದಿನಾಂಕ:15-06-2024(ಹಾಯ್ ಉಡುಪಿ ನ್ಯೂಸ್) ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಿಳೆ ಯೋರ್ವರನ್ನು ಬಲಾತ್ಕಾರದಿಂದ  ಮನೆ ಖಾಲಿ ಮಾಡುವಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಶ್ರೀಮತಿ ಶೋಭಾ (64) ಎಂಬವರು   ಪೆರ್ವಾಜೆ  ಭಾರತ್  ಬೀಡಿ  ಕಾಂಪೌಂಡ್   ಎಂಬಲ್ಲಿನ   ಬಾಡಿಗೆ  ಹಕ್ಕಿನ ಮನೆಯಲ್ಲಿ ವಾಸವಾಗಿದ್ದೇನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿ ಕೊಂಡಿದ್ದಾರೆ.

ದಿನಾಂಕ 15.06.2024  ರಂದು   ಬೆಳಿಗ್ಗೆ  ಆರೋಪಿತ ಬಿ. ಆನಂದ  ಜಿ,  ಮಂಗಳೂರು, ಶ್ರೀನಿವಾಸ, ಕಾರ್ಕಳ ಮತ್ತು ಮಲ್ಲಿಕಾರ್ಜುನ್, ಕಾರ್ಕಳ  ಎಂಬವರು ಶೋಭಾರವರ ಬಾಡಿಗೆ ಹಕ್ಕಿನ  ಮನೆಯ  ಸಮೀಪ  ಬಂದು  ಮನೆಯಿಂದ  ಹೊರಗಡೆ ಹೋಗದಂತೆ ಅಕ್ರಮವಾಗಿ  ತಡೆದು  ನಿಲ್ಲಿಸಿ   ಮನೆಯ ಸಾಮಾನುಗಳನ್ನು ಹೊರಗಡೆ  ಹಾಕಿ   ಬಲತ್ಕಾರದಲ್ಲಿ ಮನೆಯ  ಸಾಮಾನುಗಳನ್ನು   ಖಾಲಿ  ಮಾಡಿಸಲು  ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ  ಸಮಯ  ಶೋಭಾ ರವರು  ಅವರ  ಸಹೋದರ ಅನಂತಕೃಷ್ಣ ರವರಿಗೆ  ಪೋನ್  ಮಾಡಿ ಹೇಳಿದ್ದು  ಆಗ ಅವರು ಬಂದಾಗ ಅವರನ್ನು ಅಕ್ರಮವಾಗಿ  ತಡೆದು  ನಿಲ್ಲಿಸಿ  ,ಮನೆಯ  ಖಾಲಿ ಮಾಡದಿದ್ದರೆ, ಹೆಚ್ಚು  ಜನರನ್ನು  ಕರೆದುಕೊಂಡು  ಬಂದು  ಮನೆಯಿಂದ ಹೊರಗಡೆ  ಹಾಕುವುದಾಗಿ ಅಲ್ಲದೆ ಕೈ ಕಾಲು ಮುರಿದು ಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 341, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!