ಬ್ರಹ್ಮಾವರ: ದಿನಾಂಕ :16/06/2024 (ಹಾಯ್ ಉಡುಪಿ ನ್ಯೂಸ್) ಉಗ್ಗೇಲ್ಬೆಟ್ಟು ಎಂಬಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದಲ್ಲಿಗೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರಾದ ಮಧು ಬಿ ಈ ಅವರು ದಾಳಿ ನಡೆಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮಧು ಬಿ.ಈ ಅವರು ದಿನಾಂಕ:11-06-2024 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಂದ ಸಾರ್ವಜನಿಕ ಮಾಹಿತಿಯಂತೆ ಕೂಡಲೇ ಉಪ್ಪೂರು ಗ್ರಾಮದ ಉಗ್ಗೇಲ್‌ಬೆಟ್ಟು, ಗರಡಿ ರಸ್ತೆಯಲ್ಲಿರುವ ದೂಪದಹಾಡಿ ಎಂಬಲ್ಲಿ ಹೋದಾಗ ಸ್ಧಳದಲ್ಲಿ 7– 8 ಜನರು ಗುಂಪು ಸೇರಿಕೊಂಡು 2 ಕೋಳಿಯನ್ನು ಹಿಡಿದುಕೊಂಡು, ಹಣವನ್ನು ಪಣವನ್ನಾಗಿರಿಸಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದು ಅಲ್ಲಿಗೆ ದಾಳಿ ನಡೆಸಿದಾಗ ಆರೋಪಿಗಳಾದ ಉದಯ ಮತ್ತು ನಾಗರಾಜ ಎಂಬವರು ತಾವು ತಂದ ಕೋಳಿಯೊಂದಿಗೆ ಓಡಿ ಹೋಗಿರುತ್ತಾರೆ ಎನ್ನಲಾಗಿದೆ.
ಆರೋಪಿಗಳು ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಸೇರಿಸಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜುಗಾರಿ ಆಟ ನಡೆಸುತ್ತಿದ್ದರೆಂದು ದೂರಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 87, 93 KP Act & 11(1A) Animal Cruelty Act ರಂತೆ ಪ್ರಕರಣ ದಾಖಲಾಗಿದೆ.