ಕೋಟ: ದಿನಾಂಕ:08-06-2024 (ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ನೊಂದು ಸ್ವತಂತ್ರ ವಾಗಿ ಬದುಕುತ್ತಿದ್ದ ಮಹಿಳೆ ಗೆ ಗಂಡ ಹಾಗೂ ಇನ್ನಿತರರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರಿದ್ದಾರೆ.
ಬ್ರಹ್ಮಾವರ , ಗುಂಡ್ಮಿ ಗ್ರಾಮದ ನಿವಾಸಿ ದೀಕ್ಷಿತಾ (24) ಎಂಬವರು ದಿನಾಂಕ 21/01/2021 ರಂದು ಶರಣ್ ಕುಮಾರ್ ಎಂಬುವವರನ್ನು ವಿವಾಹವಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ 7-8 ತಿಂಗಳಿನಿಂದ ಗಂಡನಾದ ಆರೋಪಿ ಶರಣ್ ಕುಮಾರ ಹಾಗೂ ಅವನ ಸಂಬಂಧಿಕರು ಮನೆಯಲ್ಲಿ ಯಾವಾಗಲೂ ದೀಕ್ಷಿತಾ ಅವರಿಗೆ ಅವಾಚ್ಯವಾಗಿ ಬೈದು ಹಲ್ಲೆ ಮಾಡುತ್ತಿದ್ದು ಇದರಿಂದಾಗಿ ದೀಕ್ಷಿತಾರವರಿಗೆ ಗಂಡನ ಜೊತೆ ಜೀವನ ನಡೆಸಲು ಕಷ್ಟವಾಗಿ ತಾನು ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದು ದಿನಾಂಕ: 23/05/2024 ರಂದು ದೀಕ್ಷಿತಾ ರವರ ತಮ್ಮ ದಿನೇಶ ಎಂಬಾತನು ಕರೆ ಮಾಡಿ ಬೆದರಿಕೆ ಹಾಕಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 25/05/2024 ರಂದು ದೀಕ್ಷಿತಾ ರವರ ಬಾಡಿಗೆ ಮನೆಯ ಎದುರು ಆರೋಪಿತರಾದ ಶರಣ್ ಕುಮಾರ, ದಿವ್ಯಾ, ಜಯಂತ್, ದಿನೇಶ್, ರಾಘವೇಂದ್ರ , ಲಕ್ಷ್ಮೀ ನಾರಾಯಣ, , ಶ್ರೀಧರ ಎಂಬವರು KA-20-MF-2316 ನೇ ಏರ್ಟಿಗಾ ಕಾರ್ ನಲ್ಲಿ ಕುಳಿತುಕೊಂಡು ದೀಕ್ಷಿತಾ ಅವರನ್ನು ಕೊಂದು ಹಾಕಬೇಕು ಎಂದು ಜೋರಾಗಿ ಮಾತನಾಡುತ್ತಿದ್ದು ತನ್ನನ್ನು ಗಂಡನ ಮನೆಯಿಂದ ರಕ್ಷಿಸಿ ಕರೆದುಕೊಂಡು ಬಂದ ಅವಿಚರಣ ಎಂಬುವವರಿಗೆ ಆರೋಪಿ ಲಕ್ಷ್ಮೀ ನಾರಾಯಣ ಎಂಬವನು ಕರೆ ಮಾಡಿ ಮಾತನಾಡಲು ಇದೇ ಎಂದು ಹೇಳಿ ಅದೇ ದಿನ ಮದ್ಯಾಹ್ನ ಅವಿಚರಣ ರವರನ್ನು ಅಡ್ಡಗಟ್ಟಿ ಆರೋಪಿತರೆಲ್ಲರೂ ಸೇರಿ ಕಲ್ಲಿನಿಂದ ಅವನ ಮುಖಕ್ಕೆ ಚಚ್ಚಿ ಅವನನ್ನು ಬೀಳಿಸಿ ಕಾಲಿನಿಂದ ತುಳಿದು ನಂತರ ಬೇರೆ ಜನ ಅಲ್ಲಿ ಬರುವುದನ್ನು ನೋಡಿ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದೂರಿದ್ದಾರೆ .
ದಿನಾಂಕ 06/06/2024 ರಂದು ದೀಕ್ಷಿತಾರವರಿಗೆ ಆರೋಪಿ ಶರಣ್ ಕುಮಾರ್ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 143, 147, 341, 323, 324, 498(A), 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.