Spread the love

ಮಣಿಪಾಲ: ದಿನಾಂಕ:08-06-2024(ಹಾಯ್ ಉಡುಪಿ ನ್ಯೂಸ್) ಮನೆಗೆ ಅಕ್ರಮ ಪ್ರವೇಶ ಮಾಡಿ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ದಿನಾಂಕ:05-06-2024ರಂದು ಉಡುಪಿ ಕುಂಜಿಬೆಟ್ಟು ನಿವಾಸಿ ಶಾಂತಾ (62) ಎಂಬವರ ವಾಸದ ಮನೆಯ ಹಿಂದಿನ ಬದಿಯ ಹೆಂಚನ್ನು ಸರಿಸಿ ಆರೋಪಿಗಳಾದ 1)ವಾರಿಜ, 2) ಗುಣಲಕ್ಷ್ಮೀ, 3) ಮಮತಾ, 4) KA-20-AA-5156 ನೇ ಆಟೋ ರಿಕ್ಷಾ ಚಾಲಕ ಇವರೆಲ್ಲರೂ ಶಾಂತಾರವರ ವಾಸದ ಮನೆಗೆ ಹಿಂದಿನಿಂದ  ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಹಲವಾರು ಬಟ್ಟೆ ಬರೆ, ಸೂಟ್‌ ಕೇಸ್‌, 2 ಗ್ರಾಂ ತೂಕದ ಉಂಗುರ ಹಾಗೂ 1 ಗ್ರಾಂ ತೂಕದ ಬಂಗಾರದ ಕಾಯಿನ್‌ ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಶಾಂತಾ ಎಂಬವರು ಪೊಲೀಸರಿಗೆ  ದೂರನ್ನು ನೀಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಲಂ: 448 380 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!