ಕುಂದಾಪುರ: ದಿನಾಂಕ :11-06-2024(ಹಾಯ್ ಉಡುಪಿ ನ್ಯೂಸ್) ಗಂಡ ಬೇರೆ ಮಹಿಳೆ ಯ ಜೊತೆ ಸಹವಾಸ ಇಟ್ಟುಕೊಂಡು ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಶ್ರೀಮತಿ ರೇಷ್ಮಾ ರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ ಬೀಜಾಡಿ ಗ್ರಾಮದ ನಿವಾಸಿ ಶ್ರೀಮತಿ ರೇಷ್ಮಾ(33) ಎಂಬವರು ಆಪಾದಿತ ಶ್ಯಾಮ ಎಂಬವನನ್ನು ದಿನಾಂಕ: 12-05-2012 ರಂದು ಸಂಪ್ರದಾಯಬದ್ಧವಾಗಿ ವಿವಾಹವಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
2016 ರ ನಂತರ ಮಗುವಿನ ಆರೈಕೆ ಸಲುವಾಗಿ ರೇಷ್ಮಾ ರವರು ಅವರ ತಾಯಿ ಮನೆಗೆ ಬಂದಿರುವುದಾಗಿದೆ ತಿಳಿಸಿದ್ದಾರೆ. ಆ ಸಮಯ ಗಂಡ ಶ್ಯಾಮನು ಕೂಡ ರೇಷ್ಮಾ ರವರ ಜೊತೆಯಲ್ಲೇ ವಾಸ ಮಾಡಿಕೊಂಡಿದ್ದು, ಬಳಿಕ ಸಣ್ಣಪುಟ್ಟ ವಿಚಾರಗಳಿಗೆ ಜಗಳ ಮಾಡಿ ರೇಷ್ಮಾರವರಿಗೆ ದೈಹಿಕ ಹಿಂಸೆ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದುದಲ್ಲದೇ ಬೇರೆ ಮಹಿಳೆಯ ಜೊತೆ ಸಹವಾಸ ಮಾಡುತ್ತಿರುವುದು ರೇಷ್ಮಾ ರವರ ಗಮನಕ್ಕೆ ಬಂದು ವಿಚಾರವನ್ನು ಮನೆಯವರಿಗೆ ತಿಳಿಸಿರುವುದಕ್ಕೆ ಗಂಡ ಶ್ಯಾಮನು ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನೆಲ್ಲಾ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ದೂರಿದ್ದಾರೆ.
. ಆರೋಪಿ ಶ್ಯಾಮನ ವಶದಲ್ಲಿರುವ ರೇಷ್ಮಾ ರವರ 20 ಪವನ್ ಚಿನ್ನಾಭರಣಗಳನ್ನು ಶ್ಯಾಮನು ವಾಪಾಸು ನೀಡದೇ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ರೇಷ್ಮಾ ರವರು ದೂರು ನೀಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 489A, 504, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.