ಕಾರ್ಕಳ: ದಿನಾಂಕ:06-06-2024 (ಹಾಯ್ ಉಡುಪಿ ನ್ಯೂಸ್) ಹಿರಿಯಂಗಡಿ ದೇವಸ್ಥಾನದ ಅವ್ಯವಹಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಆಡಳಿತ ಮಂಡಳಿ ಗೆ ಸಂಬಂಧಿಸಿದವರು ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ಗುಣ ಪ್ರಕಾಶ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರ್ಕಳ ಕಸಬಾ ಗ್ರಾಮದ ನಿವಾಸಿ ಗುಣ ಪ್ರಕಾಶ್ ( 64) ಎಂಬವರು ಹಿರಿಯಂಗಡಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಭಕ್ತಾಧಿ ಎಂದು ಕೊಂಡಿದ್ದು, ಅವರಿಗೆ ದೇವಸ್ಥಾನದ ಆಡಳಿತ ಮಂಡಳಿಯವರು ಅವ್ಯವಹಾರ ಮಾಡಿರುವುದಾಗಿ ತಿಳಿದು ಬಂದಿದ್ದು ಈ ಬಗ್ಗೆ ಗುಣ ಪ್ರಕಾಶ್ ರವರು ದಿನಾಂಕ: 28/05/2024 ರಂದು ಆಡಳಿತ ಮಂಡಳಿಯವರಿಗೆ ನೊಟೀಸು ನೀಡಿದ್ದು ಅದರಲ್ಲಿ ಲೆಕ್ಕಪತ್ರಗಳ ಒಂದು ಪ್ರತಿಯನ್ನು ಕೇಳಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನಂತರ ದಿನಾಂಕ 31/05/2024 ರಂದು ಸಂಜೆ 8:30 ಗಂಟೆಗೆ ಗುಣ ಪ್ರಕಾಶ್ ರವರು ದೇವಸ್ಥಾನದ ಬಳಿ ಹೋದಾಗ ಆರೋಪಿಗಳಾದ 1. ಗಿರೀಶ್, 2. ಸುದೀಂದ್ರ, 3.ದಯಾನಂದ್, 4. ರಾಮಚಂದ್ರ, 5.ವೀರೆಂದ್ರ ಎಂಬವರು ಒಟ್ಟಾಗಿ ಏಕಾಏಕಿ ಗುಣ ಪ್ರಕಾಶ್ ರವರ ಕೊರಳ ಪಟ್ಟಿಯನ್ನು ಹಿಡಿದು ಕಾಲಿನಿಂದ ಒದ್ದು ಬೆದರಿಕೆ ಹಾಕಿ ಮೊಬೈಲ್ ಪೋನ್‌ಗೆ ಹಾನಿ ಮಾಡಿದ್ದಾರೆಂದು ಪೊಲೀಸರಿಗೆ ದೂರಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 427,323, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.