Spread the love

ಹೆಬ್ರಿ: ದಿನಾಂಕ :06/06/2024 (ಹಾಯ್ ಉಡುಪಿ ನ್ಯೂಸ್) ಚಾರ ಗ್ರಾಮದ ನಿವಾಸಿ ಮಹಿಳೆ ಹಾಗೂ ಆಕೆಯ ಮಗನಿಗೆ ಸೊಸೆ ಹಾಗೂ ಇನ್ನಿತರರು ಮಾರಕಾಯುಧ ಗಳಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಹೆಬ್ರಿ ,ಚಾರ ಗ್ರಾಮದ ನಿವಾಸಿ ಶಾರದಾ (25) ಎಂಬವರ ಸೊಸೆ ಆರೋಪಿ 1. ಕಾವೇರಿ ಮತ್ತು 2. ಶಿವರಾಜ, 3.ಮಂಜುನಾಥ, 4. ಸಂತೋಷ, 5. ಲಲಿತಾ ಎಂಬವರು ಶಾರದಾ ಮತ್ತು ಅವರ ಮಗನಿಗೆ ಹಲ್ಲೆ ಮಾಡುವ ಉದ್ದೇಶದಿಂದ ಏಕಾಏಕಿ ಶಾರದಾರವರ ಮನೆಗೆ ದಿನಾಂಕ :19-05-2024 ರಂದು ಅಕ್ರಮ ಪ್ರವೇಶ ಮಾಡಿ, ಜೊತೆಯಲ್ಲಿ ತಂದಿದ್ದ ಮಾರಕಾಯುಧಗಳಿಂದ ಕಿಟಕಿ ಬಾಗಿಲು ಮತ್ತು ದ್ವಾರಗಳನ್ನು ದ್ವಂಸ ಮಾಡಿರುವುದಲ್ಲದೇ ಶಾರದಾರವರಿಗೆ 1ನೇ ಆರೋಪಿ ಕಾವೇರಿಯು ಹಿಡಿದು ಎಳೆದು 2 ಮತ್ತು 3ನೇ ಆರೋಪಿಗಳಾದ ಶಿವರಾಜ ಮತ್ತು ಮಂಜುನಾಥ ನವರು ಕುತ್ತಿಗೆಯನ್ನು ಬಲವಾಗಿ ಒತ್ತಿ ಹಿಡಿದು ಬೆರಳಿಗೆ ಚಾಕುವಿನಿಂದ ಹೊಡೆದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ನಂತರ ಮೂವರೂ ಅರೋಪಿಗಳು ಶಾರದಾರವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ದೂಡಿ, ಕಾಲಿನಿಂದ ಭುಜಕ್ಕೆ ಮತ್ತು ಎದೆಗೆ ಒದ್ದಿದ್ದು, 4 ಮತ್ತು 5 ನೇ ಆರೋಪಿಗಳಾದ ಸಂತೋಷ ಮತ್ತು ಲಲಿತಾ ರವರು ಶಾರದಾರವರ ಮಗನನ್ನು ದೂಡಿ ಹಾಕಿ ಕೈಯಿಂದ ಪರಚಿ ಕಾಲಿನಿಂದ ಒದ್ದಿದ್ದಾರೆ ಎಂದು ದೂರಿದ್ದಾರೆ.

ನಂತರ ಮನೆಯಲ್ಲಿದ್ದ ರೂಪಾಯಿ 50,000/- ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ,ಕೊಲೆ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಶಾರದಾರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕಲಂ: 143, 147, 148, 448, 323, 324, 504, 506, 395 ಜೋತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!