ಕುಂದಾಪುರ: ದಿನಾಂಕ: 05-06-2024(ಹಾಯ್ ಉಡುಪಿ ನ್ಯೂಸ್) ಹಂಗಳೂರು ಗ್ರಾಮದ ಕಟ್ಟಿಗೆ ಮಿಲ್ ಒಂದಕ್ಕೆ ನುಗ್ಗಿದ ಏಳು ಜನರ ತಂಡವೊಂದು ಕಟ್ಟಿಗೆ ಮಿಲ್ ನಲ್ಲಿದ್ದ ಯುವಕನಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಯುವಕ ದೂರು ನೀಡಿದ್ದಾರೆ.
ಕುಂದಾಪುರ ,ಹಂಗಳೂರು ಗ್ರಾಮದ ನಿವಾಸಿ ಶರತ್ (35) ಎಂಬವರು ದಿನಾಂಕ 03/06/2024 ರಂದು ಹಂಗಳೂರು ಗ್ರಾಮದ ಅನುಗ್ರಹ ಕಟ್ಟಿಗೆ ಮಿಲ್ ನಲ್ಲಿ ಇರುವಾಗ ಆರೋಪಿಗಳಾದ 1) ಪ್ರಕಾಶ್, 2) ಪ್ರಶಾಂತ್ , 3) ಜವಾಹರಲಾಲ್,4) ರಮೇಶ, 5) ದಿನೇಶ, 6) ಗಣೇಶ, 7) ಉಮೇಶ ಎಂಬವರು ಮಿಲ್ಲಿನ ಕಂಪೌಂಡ್ ಒಳಗೆ ಅಕ್ರಮ ಪ್ರವೇಶ ಮಾಡಿ ಅರೋಪಿಗಳ ಪೈಕಿ ಪ್ರಕಾಶ ಮತ್ತು ಪ್ರಶಾಂತ ಎಂಬುವವರು ಮಿಲ್ಲಿನ ಕಚೇರಿ ಒಳಗೆ ಅಕ್ರಮ ಪ್ರವೇಶ ಮಾಡಿ ಶರತ್ ರವರನ್ನು ಹಿಡಿದುಕೊಂಡು ತುಳಿದು ಹೊರಗೆ ಎಳೆದುಕೊಂಡು ಬಂದಿದ್ದು, ಉಳಿದ ಆರೋಪಿಗಳೆಲ್ಲರೂ ಸೇರಿ ಶರತ್ ರನ್ನು ಬೀಳಿಸಿ ಎಡಭುಜಕ್ಕೆ ಮತ್ತು ಎಡಬದಿ ಹೊಟ್ಟೆಗೆ ಕಾಲಿನಿಂದ ತುಳಿದು ಅವಾಚ್ಯ ಶಬ್ದದಿಂದ ಬೈದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಶರತ್ ರವರಿಗೆ ಎಡಭುಜ ಮತ್ತು ಎಡಬದಿ ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿ ಕೊಂಡ ಕಾರಣದಿಂದ ದಿನಾಂಕ 04/06/2024 ರಂದು ಸಂಜೆ ಕುಂದಾಪುರ ಚಿನ್ಮಯ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 143 147, 447, 448, 323, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.