ಮಣಿಪಾಲ: ದಿನಾಂಕ 05/06/2024 (ಹಾಯ್ ಉಡುಪಿ ನ್ಯೂಸ್) ದಶರಥ ನಗರದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಈರ್ವರನ್ನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದೇವರಾಜ ಟಿ.ವಿ ಅವರು ಬಂಧಿಸಿದ್ದಾರೆ.
,ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ದೇವರಾಜ ಟಿ.ವಿ ಅವರಿಗೆ ದಿನಾಂಕ:04-06-2024 ರಂದು ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ದಶರಥ ನಗರ ಎಂಬಲ್ಲಿನ ವಿಜಯ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ಹಿಂಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಬಂದ ಸಾರ್ವಜನಿಕ ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕೆ ತಲುಪಿ ಅವರನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 1. ಅಬ್ದುಲ್ ರಜಾಕ್ (26), 2. ಮುದುಕಪ್ಪ(39) ಎಂಬುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಅಬ್ದುಲ್ ರಜಾಕ್ ನ ಬಳಿ ಇದ್ದ ಮದ್ಯ ತುಂಬಿದ 60 ಟೆಟ್ರಾ ಪ್ಯಾಕೇಟ್‌ಗಳು ಹಾಗೂ ಮುದುಕಪ್ಪ ನ ಬಳಿ ಇದ್ದ ಮದ್ಯ ತುಂಬಿದ 15 ಟೆಟ್ರಾ ಪ್ಯಾಕೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ . ಅರೋಪಿಗಳು ಲೋಕಸಭಾ ಚುನಾವಣಾ ಮತ ಎಣಿಕೆ ಪ್ರಯುಕ್ತ ಮದ್ಯ ಮಾರಾಟ ನಿಷೇದ ಇದ್ದರೂ ಕೂಡಾ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಮದ್ಯ ಮಾರಾಟ ಮಾಡಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 32, 34 KE Act ರಂತೆ ಪ್ರಕರಣ ದಾಖಲಾಗಿದೆ.