Spread the love

ಬೈಂದೂರು: ದಿನಾಂಕ:03-06-2024 (ಹಾಯ್ ಉಡುಪಿ ನ್ಯೂಸ್) ಡಾಕ್ಟರ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಯೋರ್ವ ಹಣ ಪಡೆದು ವಂಚನೆ ನಡೆಸಿದ್ದಾನೆ ಎಂದು ದೂರು ದಾಖಲಾಗಿದೆ.

ಮೈಸೂರು ,ಬೋಗಾದಿ ಎಂಬಲ್ಲಿನ ನಿವಾಸಿ ಬಿ ಎಸ್ ಶೋಭಾ (54) ಎಂಬವರಿಗೆ  2020/21 ರಲ್ಲಿ ಆಪಾದಿತ ಸುದರ್ಶನ ಎಂಬವನ ಪರಿಚಯ ಆಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆಪಾದಿತ ಸುದರ್ಶನನು ತಾನು ಡಾಕ್ಟರ್ ಎಂಬುದಾಗಿ ಹೇಳಿಕೊಂಡು ಬಿ.ಎಸ್ ಶೋಭಾ ರವರನ್ನು ನಂಬಿಸಿ ಅವರಿಂದ ದಿನಾಂಕ 20/10/2020 ರಂದು ರೂಪಾಯಿ 3 ಲಕ್ಷ ಹಣವನ್ನು ಸಾಲವಾಗಿ ಪಡೆದುಕೊಂಡು ಆ ಬಳಿಕ ಸ್ವಲ್ಪ ಸ್ವಲ್ಪ ಮೊತ್ತವಾಗಿ ಒಟ್ಟು ರೂಪಾಯಿ 5 ಲಕ್ಷ ಹಣವನ್ನು ಪಡೆದುಕೊಂಡಿರುತ್ತಾನೆ ಎಂದು ಪೊಲೀಸರಿಗೆ ದೂರಿದ್ದಾರೆ.

ಆ ಬಳಿಕ  ಬಿ ಎಸ್ ಶೋಭಾರವರಿಗೆ ಹಣವನ್ನು ಹಿಂತಿರುಗಿಸದೇ ಸತಾಯಿಸುತ್ತಿದ್ದು  ಬಿ ಎಸ್ ಶೋಭಾರವರಿಗೆ  ಬೇರೆ ಬೇರೆ ರೀತಿಯಲ್ಲಿ ಬೆದರಿಕೆ ಹಾಕುತ್ತಿದ್ದಾನೆ ಎಂದಿದ್ದಾರೆ. ಅಲ್ಲದೇ ಆಪಾದಿತ ಸುದರ್ಶನನು  ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ  ಕಲಂ: 417,420 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!