Spread the love

ಶಂಕರನಾರಾಯಣ: ದಿನಾಂಕ:03-06-2024( ಹಾಯ್ ಉಡುಪಿ ನ್ಯೂಸ್) ಗೋಳಿಯಂಗಡಿ ಪರಿಸರದ ಹಾಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಯನ್ನು ಶಂಕರನಾರಾಯಣ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ನಾಸೀರ್ ಹುಸೇನ್  ಅವರು ಬಂಧಿಸಿದ್ದಾರೆ.

ಶಂಕರನಾರಾಯಣ ಪೊಲೀಸ್ ಠಾಣೆ ಪಿಎಸ್ಐ ಯವರಾದ ನಾಸಿರ್ ಹುಸೇನ್ ಅವರು ದಿನಾಂಕ 02/06/2024 ರಂದು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯ ದಲ್ಲಿರುವಾಗ ಸಾರ್ವಜನಿಕರೊಬ್ಬರು ಕರೆಮಾಡಿ ಹೆಬ್ರಿ ತಾಲೂಕು ಗೋಳಿಯಂಗಡಿ ಎಂಬಲ್ಲಿನ ಶ್ರೀ ಲಕ್ಷ್ಮೀ ಬಾರ್ & ರೆಸ್ಟೊರೆಂಟ್ ಹಿಂಬದಿಯ ಹಾಡಿಯಲ್ಲಿ ಯಾರೋ ಮಧ್ಯ ಮಾರಾಟ ಮಾಡುತ್ತಿರುವುದಾಗಿ ನೀಡಿದ ಖಚಿತ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ಹೋದಾಗ ಆರೋಪಿ ಓರ್ವನು ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ HAYWARDS CHEERS WHISKY 90 ಎಮ್‌ಎಲ್‌‌ನ 40 ಸ್ಯಾಚೆಟ್ ಹಾಗೂ, OFFICERS CHOICE STAR SUPREME WHISKY 180 ಎಮ್‌‌.ಎಲ್‌ನ 12 ಸ್ಯಾಚೆಟ್‌‌ಗಳನ್ನು ಆತನ ವಶ ಇರಿಸಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ.

ಪಿಎಸ್ಐ ಯವರು ಸಿಬ್ಬಂದಿಯವರೊಂದಿಗೆ ಧಾಳಿ ನಡೆಸಿ ಮದ್ಯದ ಸ್ಯಾಚೆಟ್ ಹಾಗೂ ನಗದು ಹಣ 580/- ರೂಪಾಯಿಯನ್ನು ಆಪಾದಿತನನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!