Spread the love

ಕಾರ್ಕಳ: ದಿನಾಂಕ: 25-05-2024 (ಹಾಯ್ ಉಡುಪಿ ನ್ಯೂಸ್) ದರೋಡೆ ನಡೆಸಲು ಮಾರಕಾಸ್ತ್ರ ಹಿಡಿದು ಕಾರಿನಲ್ಲಿ ಬಂದಿದ್ದ ಐವರ ತಂಡ ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ ಎಂದು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ತಾಲೂಕು ಕೌಡೂರು ಗ್ರಾಮದ ಕಂಪನ ಎಂಬಲ್ಲಿ ದಿನಾಂಕ  : 24-05-2024 ರಂದು KA-47-M-4598 ನೇ ಕಾರಿನಲ್ಲಿ ಆಪಾದಿತರಾದ.  ಇಸಾಕ್‌, ಕಬೀರ್‌, ಇಬ್ರಾಹಿಂ, ಮಹಮ್ಮದ್‌ ಶಿಯಾಬ್‌, ಬಂಗ್ಲೆಗುಡ್ಡೆ ಫೈಜಲ್‌  ಎಂಬವರು ಕುಳಿತು ಡ್ರ್ಯಾಗರನ್ನು ಇಟ್ಟುಕೊಂಡು ದರೋಡೆ ಮಾಡುವ ಉದ್ದೇಶದಿಂದ ಸಂಚನ್ನು ರೂಪಿಸುತ್ತಿದ್ದು ಪೊಲೀಸರನ್ನು ಕಂಡು ಕಾರನು ಬಿಟ್ಟು ಓಡಿ ಹೋಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 27 ಆರ್ಮ್ಸ್‌ ಕಾಯ್ದೆ 1958 ಮತ್ತು ಕಲಂ: 399, 402 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!