Spread the love

ಉಡುಪಿ: ದಿನಾಂಕ :24-05-2024(ಹಾಯ್ ಉಡುಪಿ ನ್ಯೂಸ್)

ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ  ಇವರ ವತಿಯಿಂದ
ದಿನಾಂಕ 21/5/2024-ರಂದು  ಉಡುಪಿ ಜಿಲ್ಲಾಧಿಕಾರಿ ಕಛೇರಿಯಲ್ಲಿ   ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಯವರನ್ನು ಭೇಟಿ ಮಾಡಿ ಅವರೊಂದಿಗೆ ಕನ್ನಡ ನಾಮಫಲಕ ಉಡುಪಿ ಜಿಲ್ಲೆಯಲ್ಲಿ ಕಡ್ಡಾಯವಾಗಿ ಹಾಕಲೇಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಠಿಣವಾದ ಕ್ರಮವನ್ನು ನಾವು ಕೈಗೊಳ್ಳುತ್ತೇವೆ. ಎಂದು ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಅವರು ಅವರೊಂದಿಗೆ ಚರ್ಚೆ ಮಾಡಿದರು. ಈ ಕುರಿತು ಅವರು ನಾಮಫಲಕದ ವಿಷಯ ಕುರಿತು ಇದಾಗಲೇ ಪ್ರತಿಯೊಬ್ಬ ವ್ಯಾಪಾರಸ್ಥರಿಗೆ ನೋಟಿಸ್ ಅನ್ನು ನಾವು ಕಳಿಸಿದ್ದೇವೆ. ಅದು ಆಗದೆ ಇದ್ದಲ್ಲಿ ಪ್ರತಿಯೊಬ್ಬರಿಗೂ ಪೆನಾಲ್ಟಿ ಹಾಕುತ್ತೇವೆ. ನೀವು ಸ್ವಲ್ಪ ನಮಗೆ ಕಾಲಾವಕಾಶ ಕೊಡಬೇಕು. ಎಂದು ಹೇಳಿದರು.


ಉಡುಪಿ ನಗರಸಭೆಯ ಪೌರಾಯುಕ್ತ ರವರನ್ನು ಕನ್ನಡ ನಾಮಪಲಕ ಅಳವಡಿಕೆಗೆ ಉಡುಪಿಯಲ್ಲಿ ವಿಳಂಬವಾಗಲು ಕಾರಣವೇನು ? ಮುಂದಿನ ದಿನಗಳಲ್ಲಿ ಕನ್ನಡ ನಾಮ ಫಲಕ ಕಡ್ಡಾಯವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಕರವೇ ಇದನ್ನು ಕಠಿಣವಾಗಿ ಖಂಡಿಸಲಿದೆ ಎಂದು ಎಚ್ಚರಿಸಿದರು.
ನಗರಸಭೆಯ ಪೌರಾಯುಕ್ತರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಈ ಕುರಿತು ವಿಚಾರಣೆ ಮಾಡಿದರು. ಪತ್ರಿಕೆಗಳಲ್ಲಿ ಕನ್ನಡ ನಾಮಪಲಕ ಕಡ್ಡಾಯದ ವರದಿ  ಹಾಗೂ ಕನ್ನಡ ನಾಮಫಲಕ ಅಳವಡಿಸದ ಪ್ರತಿಯೊಬ್ಬ ವ್ಯಾಪಾರಸ್ಥರಿಗೆ ತಲಾ ಐದು ಸಾವಿರ ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ. ಜಿಲ್ಲಾ ಸಲಹೆಗಾರಾದ ಪ್ರಕಾಶ್ ದೇವಾಡಿಗ. ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಗೋಪಾಲ್ ದೊರೆ. ಜಿಲ್ಲಾ ಸಹ ಸಾಂಸ್ಕೃತಿ ಕಾರ್ಯದರ್ಶಿಯಾದ ರಾಜಕುಮಾರ್. ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ದೇವಕಿ ಬಾರ್ಕೂರು , ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಜ್ಯೋತಿ, ಜಿಲ್ಲಾ ಮಹಿಳಾ ಕಾರ್ಯದರ್ಶಿಯಾದ ಚಂದ್ರಕಲಾ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿಯಾದ ಆಶಾ, , ಕಾಪು ತಾಲೂಕು ಮಹಿಳಾ ಅಧ್ಯಕ್ಷರಾದ ಶಶಿಕಲಾ ನವೀನ್, ಕಾಪು ತಾಲೂಕು ಮಹಿಳಾ ಉಪಾಧ್ಯಕ್ಷರಾದ ಶಾಲಿನಿ ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

error: No Copying!