ಕಾರ್ಕಳ: ದಿನಾಂಕ 23/05/2024 (ಹಾಯ್ ಉಡುಪಿ ನ್ಯೂಸ್) ಪೆರ್ವಾಜೆಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಇಬ್ಬರನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಯಶವಂತ ಅವರು ಬಂಧಿಸಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಯಶವಂತ ಅವರಿಗೆ ದಿನಾಂಕ :22-05-2024 ರಂದು ಪೆರ್ವಾಜೆ ಕೊರಗಜ್ಜ ಗರಡಿಗೆ ಹೋಗುವ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳ ಕಾಲಿಗೆ ಹಿಂಸಾತ್ಮಕ ರೀತಿಯಲ್ಲಿ ಬಾಳು (ಕತ್ತಿ) ಕಟ್ಟಿ ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದಾಗಿ ಬಂದ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ ಅಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಆರೋಪಿ ಗಳಾದ ಸುರೇಶ ಹಾಗೂ ಸದಾಶಿವ ಎಂಬವರನ್ನು ಬಂಧಿಸಿ ಸ್ಥಳದಲ್ಲಿ ಇದ್ದ ಹುಂಜಗಳು, ಕಾಲಿಗೆ ಕಟ್ಟಿದ ಬಾಳುಗಳು, ಕಟ್ಟಲು ಉಪಯೋಗಿಸುವ ದಾರಗಳು, ಆಟೋ ರಿಕ್ಷಾ-2, ಮಾರುತಿ ಓಮಿನಿ ಕಾರು, ದ್ವಿಚಕ್ರ ವಾಹನ, ನಗದು ಹಣ 200/- ರೂಪಾಯಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 87, 93 ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು 11(1) (ಎನ್) Prevention Of Cruelty to Animals Acẗ 1960 ರಂತೆ ಪ್ರಕರಣ ದಾಖಲಾಗಿದೆ.