ಹಿರಿಯಡ್ಕ : ದಿನಾಂಕ: 14-05-2024 (ಹಾಯ್ ಉಡುಪಿ ನ್ಯೂಸ್) ಗಂಡ ತನ್ನನ್ನು ಮತ್ತು ಮಗುವನ್ನು ನಿರ್ಲಕ್ಷ್ಯ ಮಾಡಿ ತವರು ಮನೆಗೆ ಹೋಗು ಎಂದು ಬೆದರಿಸುತ್ತಿದ್ದಾರೆ ಎಂದು ಪೆರ್ಡೂರು ಗ್ರಾಮದ ಶ್ರೀಮತಿ ಅನಿತಾ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ತಾಲೂಕು ಪೆರ್ಡೂರು ಗ್ರಾಮದ ನಿವಾಸಿ ಶ್ರೀಮತಿ ಅನಿತಾ (26) ಎಂಬವರು ದಿನಾಂಕ: 20/02/2022 ರಂದು ಪ್ರಸಾದ್ ಕುಮಾರ್ ಎಂಬವರನ್ನು ಮದುವೆಯಾಗಿದ್ದು , ಮದುವೆಯ 3 ತಿಂಗಳ ಬಳಿಕ ಶ್ರೀಮತಿ ಅನಿತಾ ರವರನ್ನು ನೀನು ನನಗೆ ಇಷ್ಟವಿಲ್ಲ, ಹೋಗುವುದಾದರೆ ಹೋಗು ಎಂದು ಗಂಡ ಪ್ರಸಾದ್ ಕುಮಾರ್ ಹೀಯಾಳಿಸುತ್ತಿದ್ದು, ಕಿರಿಕಿರಿ ಮಾಡುತ್ತಿದ್ದು ಶ್ರೀಮತಿ ಅನಿತಾ ರವರು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮಗುವನ್ನು ತಾಯಿಯನ್ನು ಯೋಗಕ್ಷೇಮ ನೋಡದೆ ಗಂಡ ಪ್ರಸಾದ್ ಕುಮಾರ್ ನಿರ್ಲಕ್ಷಿಸಿರುತ್ತಾರೆ ಎಂದು ಶ್ರೀಮತಿ ಅನಿತಾ ರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 498(A̧) 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.