- ಉಡುಪಿ: ದಿನಾಂಕ 09/05/2024 (ಹಾಯ್ ಉಡುಪಿ ನ್ಯೂಸ್) ಕುಂದಾಪುರ ಗಾಂಧಿ ಮೈದಾನದ ಸಮೀಪ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಿರತರಾಗಿದ್ದವರನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾದ ರಾಮಚಂದ್ರ ನಾಯಕ್ ಅವರು ಬಂಧಿಸಿದ್ದಾರೆ.
- ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆ,ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ಅವರಿಗೆ ದಿನಾಂಕ:08-05-2024 ರಂದು ಕುಂದಾಪುರ ನಗರದ ಗಾಂಧಿ ಮೈದಾನದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸುದರ್ಶನ್ ಮತ್ತು ಕರ್ತವ್ಯ ಎಂಬವರು ಜೊತೆಯಾಗಿ ಸೇರಿಕೊಂಡು PARKER ಎಂಬ ಬೆಟ್ಟಿಂಗ್ ಮೊಬೈಲ್ ಅಪ್ಲಿಕೇಶನ್ ಆ್ಯಪ್‌ನ ಸಹಾಯದಿಂದ ತಮ್ಮಲ್ಲಿರುವ ಸ್ಮಾರ್ಟ್‌ಫೋನ್ ಮೂಲಕ SRH (ಸನ್‌ರೈಸರ್ಸ್ ಹೈದರಾಬಾದ್) ಮತ್ತು LSG (ಲಕ್ನೋ ಸೂಪರ್ ಜೈಂಟ್ಸ್) ತಂಡಗಳ ನಡುವೆ ನಡೆಯುವ IPL T20 ಕ್ರಿಕೆಟ್ ಮ್ಯಾಚ್‌ಗೆ ಸಂಬಂಧಪಟ್ಟು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ದೊರಕಿದ್ದು, ಅಲ್ಲದೇ ಇವರು ಬೆಟ್ಟಿಂಗ್‌ನಲ್ಲಿ ಸಂಗ್ರಹ ಮಾಡಿದ ಹಣವನ್ನು ಪಡೆದುಕೊಂಡು ಹೋಗಲು ಸ್ಥಳಕ್ಕೆ ಹೆಬ್ರಿ ನಿವಾಸಿ ತೇಜಸ್ ಎಂಬಾತನು ಬರುವ ಬಗ್ಗೆ ಮಾಹಿತಿ ಬಂದಿರುತ್ತದೆ ಎನ್ನಲಾಗಿದೆ.
- ತೇಜಸ್ ಈತನು ಸುದರ್ಶನ್, ಕರ್ತವ್ಯ ಮತ್ತು ಇನ್ನೂ ಕೆಲವರಿಗೆ ಈ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನನ್ನು ಡೌನ್‌ಲೋಡ್ ಮಾಡಿಕೊಟ್ಟಿರುವ ಬಗ್ಗೆ ತನಿಖೆಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ .ಮೂವರನ್ನು ಬಂಧಿಸಲಾಗಿದೆ.
- ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 78 KP ACT ರಂತೆ ಪ್ರಕರಣ ದಾಖಲಾಗಿದೆ.