Spread the love

ಬೈಂದೂರು: ದಿನಾಂಕ: 09/05/2024 (ಹಾಯ್ ಉಡುಪಿ ನ್ಯೂಸ್) ನಾವುಂದ ಗ್ರಾಮದ ಗಣೇಶ ನಗರದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಐವರನ್ನು ಬೈಂದೂರು ಪೊಲೀಸ್‌ ಠಾಣೆಯ ಠಾಣಾಧಿಕಾರಿಯವರಾದ  ಹರ್ಷ ಪ್ರಿಯಂವದಾ ಅವರು ಬಂಧಿಸಿದ್ದಾರೆ.

ಬೈಂದೂರು ಪೊಲೀಸ್‌ ಠಾಣೆಯ ಠಾಣಾಧಿಕಾರಿಯವರಾದ ಹರ್ಷ ಪ್ರಿಯಂವದಾ IPS (P) ಅವರಿಗೆ ದಿನಾಂಕ : 08-05-2024 ರಂದು ನಾವುಂದ ಗ್ರಾಮದ ಗಣೇಶ ನಗರ ಎಂಬಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಗಳೊಂದಿಗೆ  ನಾವುಂದ ಗ್ರಾಮದ ಗಣೇಶ ನಗರ ಕ್ರಾಸ್ ಬಳಿ ರಾಮ ಎಂಬುವವರ ಮನೆಯ ಕಂಪೌಂಡ್ ಒಳಗಡೆ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಲ್ಲಿಗೆ ದಾಳಿ ನಡೆಸಿ ಅಲ್ಲಿ ಇಸ್ಪೀಟು ಜುಗಾರಿ ಆಟವಾಡುತ್ತಿದ್ದ 1. ಗಣಪತಿ, 2. ರಾಘವೇಂದ್ರ, 3.ನಾಗೇಶ, 4.ಮಂಜುನಾಥ , 5.ಶೇಖರ ಎಂಬವರನ್ನು ಬಂಧಿಸಿ,ವಶಕ್ಕೆ ಪಡೆದುಕೊಂಡು ಆಟಕ್ಕೆ ಬಳಸಿದ ಹಳೆಯ ನ್ಯೂಸ್‌ಪೇಪರ್‌, ಇಸ್ಪಿಟ್‌ಕಾರ್ಡ್ ಹಾಗೂ 12,070/- ರೂಪಾಯಿ ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 79 , 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!