ಉಡುಪಿ: ದಿನಾಂಕ:10-05-2024 (ಹಾಯ್ ಉಡುಪಿ ನ್ಯೂಸ್) ವರ್ಕ್ ಪ್ರಾಮ್ ಹೋಮ್ ಕೆಲಸ ಮಾಡಬಾರದು,ಕೆಲಸ ಬಿಟ್ಟು ಮನೆ ಕೆಲಸ ಮಾಡಿಕೊಂಡಿರ ಬೇಕೆಂದು ಗಂಡ ಹಾಗೂ ಗಂಡನ ಮನೆಯವರು ಹಲ್ಲೆ ನಡೆಸಿ ಇದೀಗ ತಲಾಕ್ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವಿವಾಹಿತ ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
- ಉಡುಪಿ, ಕುಂಜಿಬೆಟ್ಟು ನಿವಾಸಿ ಅಲಿಯಾ ಅನ್ಸಾರ್ (30) ಎಂಬವರು ಆಪಾದಿತ ಮೊಹಮ್ಮದ್ ಜಾಹಿದ್ ಎಂಬವರನ್ನು ದಿನಾಂಕ 15/11/2021 ರಂದು ಉದ್ಯಾವರ ಹಲೀಮ ಸಾಬ್ಜು ಆಡಿಟೋರಿಯಮ್ ನಲ್ಲಿ ಪದ್ದತಿಯಂತೆ ಮದುವೆಯಾಗಿದ್ದು ತವರು ಮನೆಯಿಂದ 45 ಪವನ್ ಚಿನ್ನ ಹಾಕಿ ಮದುವೆ ಮತ್ತು ಮೆಹೆಂದಿಗೆ 20 ಲಕ್ಷ ಖರ್ಚು ಆಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಮದುವೆ ನಂತರ ಸುಮಾರು 9 ತಿಂಗಳು ದಾಂಪತ್ಯ ಜೀವನ ಚೆನ್ನಾಗಿದ್ದು ನಂತರ ಆಪಾದಿತರಾದ 1. ಮೊಹಮ್ಮದ್ ಜಾಹಿದ್, 2..ಕೆ.ಎಸ್. ಮಯ್ಯದಿ, 3. ಜೋಹರ ಇವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲು ಶುರು ಮಾಡಿರುತ್ತಾರೆ ಎಂದು ಅಲಿಯಾ ಅನ್ಸಾರ್ ರವರು ಪೊಲೀಸರಿಗೆ ದೂರಿದ್ದಾರೆ.
- ಅಲಿಯಾ ಅನ್ಸಾರ್ ರವರು ಗಂಡನ ಮನೆಯಲ್ಲಿ ವರ್ಕ್ ಫ್ರೊಮ್ ಹೋಮ್ ಕೆಲಸ ಮಾಡಿಕೊಂಡಿರುವಾಗ 1 ರಿಂದ 3 ನೇ ಆಪಾದಿತರು ವರ್ಕ್ ಫ್ರೊಮ್ ಹೋಮ್ ಕೆಲಸ ಮಾಡಿದರೆ ನಾವು ಅವನಿಗೆ ಬೇರೆ ಮದುವೆ ಮಾಡುತ್ತೇವೆ. ನಮ್ಮ ಜಾತಿ ಸಂಪ್ರದಾಯದ ಪ್ರಕಾರ ಹೆಣ್ಣು ಮಕ್ಕಳು ಕೆಲಸ ಮಾಡಬಾರದು ನಿನಗೆ ಮದುವೆ ಮಾಡಿಸಿದ್ದು ಮನೆ ಕೆಲಸ ಮಾಡಲು ನೀನು ಕೆಲಸ ಮಾಡಿದರೆ ಮನೆ ಬಿಟ್ಟು ಹೋಗಬೇಕು ಎಂದು ಹೇಳಿದಾಗ ಅಲಿಯಾ ಅನ್ಸಾರ್ ರವರು ಅವರ ಮಾತಿಗೆ ಒಪ್ಪದೇ ಇದ್ದಾಗ 1 ರಿಂದ 3 ನೇ ಆಪಾದಿತರು ಎಲ್ಲರೂ ಹಲ್ಲೆ ಮಾಡುವ ಉದ್ದೇಶದಿಂದ ಕೈಗಳಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ 45 ಪವನ್ ಚಿನ್ನ ಹಾಗೂ ಶಾಲಾ ದಾಖಲಾತಿ ಮತ್ತು ಇತರ ವಸ್ತುಗಳನ್ನು ಕೊಡದೇ ಮನೆಯಿಂದ ಹೊರಗಡೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ನಂತರ ಗಂಡನಾದ ಮೊಹಮ್ಮದ್ ಜಾಹಿದ್ ನು ತಲಾಕ್ ಕೊಡುವುದಾಗಿ ಬೆದರಿಸಿ ನಾಯಿಫಾ ಎಂಬ ಮಹಿಳೆಯೊಂದಿಗೆ 2 ನೇ ಮದುವೆ ಆಗಿರುತ್ತಾನೆ ಎಂದು ಅಲಿಯಾ ಅನ್ಸಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
- ಅವರು ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 498(A), 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.