ಬೆಂಗಳೂರು: ದಿನಾಂಕ: 27-04-2024(ಹಾಯ್ ಉಡುಪಿ ನ್ಯೂಸ್)
ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಇಂದು ರಾಜ್ಯದ ಹದಿನಾಲ್ಕು ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದ್ದು, ಶೇಕಡಾ 69.23ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
14 ಕ್ಷೇತ್ರಗಳ ಶೇಕಡಾವಾರು ಮತದಾನ ಈ ಕೆಳಗಿನಂತಿವೆ
ಉಡುಪಿ -ಚಿಕ್ಕಮಗಳೂರು: ಶೇ 76.06
ದಕ್ಷಿಣ ಕನ್ನಡ: ಶೇ 77.43
ಹಾಸನ: ಶೇ 77.51
ಚಿತ್ರದುರ್ಗ: ಶೇ 73.11
ಮಂಡ್ಯ: ಶೇ 81.48
ತುಮಕೂರು: ಶೇ 77.70
ಮೈಸೂರು: ಶೇ 70.45
ಚಾಮರಾಜನಗರ: ಶೇ 76.59
ಬೆಂಗಳೂರು ಗ್ರಾಮಾಂತರ: ಶೇ 67.29
ಬೆಂಗಳೂರು ಉತ್ತರ: ಶೇ 54.42
ಬೆಂಗಳೂರು ಕೇಂದ್ರ: ಶೇ 52.81
ಬೆಂಗಳೂರು ದಕ್ಷಿಣ: ಶೇ 53.15
ಚಿಕ್ಕ ಬಳ್ಳಾಪುರ: ಶೇ 76.82
ಕೋಲಾರ: ಶೇ 78.06
ಹದಿನಾಲ್ಕು ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ ಅತೀ ಹೆಚ್ಚು ಅಂದರೆ ಶೇ 81.48 ಹಾಗೂ ಬೆಂಗಳೂರು ಕೇಂದ್ರದಲ್ಲಿ ಅತೀ ಕಡಿಮೆ ಅಂದರೆ ಶೇ 52.8 ರಷ್ಟು ಮತದಾನ ವಾಗಿದೆ.