Spread the love

ಕಾಪು: ಕಾಪು ಪೊಲೀಸ್ ಠಾಣಾ ಎ.ಎಸ್.ಐ ಯವರಾದ  ರವೀಶ ಹೊಳ್ಳ ರವರು ದಿನಾಂಕ 20.04.2024 ರಂದು ಬೆಳಿಗ್ಗೆ  ಪಿ.ಸಿ.  ಗಂಗಾಧರ ರವರ  ಜೊತೆಯಲ್ಲಿ  ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ಕಾಪು ಪಡು ಗ್ರಾಮದ ಕಾಪು ಪೇಟೆಯ ಜಯಲಕ್ಷ್ಮೀ ಜ್ಯುವೆಲ್ಲರ್ಸ್‌  ಎದುರು ಕಾಪು ಪೇಟೆ-ಪೊಲಿಪು ಜಂಕ್ಷನ್‌ ನಡುವಿನ ರಸ್ತೆಯಲ್ಲಿ ತಲುಪುವಾಗ ಇಬ್ಬರು ಗಂಡಸರು ಮತ್ತು ಮೂರು ಜನ ಹೆಂಗಸರು ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಕೈಯಿಂದ ಹೊಡೆದಾಡುತ್ತಿದ್ದು, ಎ.ಎಸ್.ಐ ರವೀಶ ಹೊಳ್ಳ ರವರು ಅವರ ಬಳಿ ಹೋಗಿ ಅವರ ಜಗಳವನ್ನು ತಡೆಯುವ ಸಮಯದಲ್ಲಿ ಅವರಲ್ಲಿ  ಒಬ್ಬ ವ್ಯಕ್ತಿಯು ಅಲ್ಲಿಂದ ಓಡಿ ಹೋಗಿರುತ್ತಾನೆ ಎನ್ನಲಾಗಿದೆ .

ಉಳಿದವರನ್ನು ವಿಚಾರಿಸಿದಾಗ, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಅವರು  ಪರಸ್ಪರ ಜಗಳ ಮಾಡುತ್ತಿದ್ದುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ನೆಮ್ಮದಿಗೆ  ಭಂಗ ಉಂಟಾಗುವಂತೆ ಹೊಡೆದಾಡಿಕೊಳ್ಳುವುದು, ಬೈದಾಡಿಕೊಳ್ಳುವುದು ಅಪರಾಧ ಎಂದು ಅವರಿಗೆ ತಿಳಿಸಿ, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ  ಹೊಡೆದಾಡಿಕೊಂಡ ವ್ಯಕ್ತಿಗಳನ್ನು ವಿಚಾರಿಸಿದಾಗ ಅವರ ಹೆಸರು, ವಿಳಾಸ  1. ಶ್ರೀಮತಿ ಜುಬೈದಾ,  2. ಅಬ್ದುಲ್‌ ರೆಹಮಾನ್‌, 3. ಶ್ರೀಮತಿ ಮೈಮುನಾ ಎ., 4. ಶ್ರೀಮತಿ ಆಯಿಷತ್‌ ಫೈರೋಜಾ ಎಂ. ಎಂದು ತಿಳಿಸಿರುತ್ತಾರೆ ಎನ್ನಲಾಗಿದೆ.

ಸ್ಥಳದಿಂದ ಓಡಿ ಹೋದವನ ಹೆಸರು, ಅಬ್ದುಲ್‌ ಖಾದರ್‌ ಯಾನೆ ಡೆಪ್ಟಾಲ್‌ ಖಾದರ್‌ ಎಂದು ತಿಳಿದು ಬಂದಿರುತ್ತದೆ. ಅವರಲ್ಲಿ ಅಬ್ದುಲ್‌ ಖಾದರ್‌ ಯಾನೆ ಡೆಪ್ಟಾಲ್‌ ಖಾದರ್‌ ಮತ್ತು  ಜುಬೈದಾ ಒಂದು ಕಡೆಯವರೆಂದೂ, ಅಬ್ದುಲ್‌ ರೆಹಮಾನ್‌, ಮೈಮುನಾ ಮತ್ತು ಆಯಿಷತ್‌ ಫೈರೋಜಾ ರವರು ಒಂದು ಕಡೆಯವರೆಂದೂ, ಅವರೊಳಗೆ ಹಣಕಾಸಿನ ವ್ಯವಹಾರ ಇದ್ದು ಅದರಲ್ಲಿನ ತಕರಾರಿನ ಬಗ್ಗೆ ಜಗಳ ಮಾಡಿಕೊಂಡು ಹೊಡೆದಾಟ ಮಾಡಿರುತ್ತಾರೆಂದು  ವಿಚಾರಣೆಯಲ್ಲಿ ತಿಳಿದು  ಬಂದಿರುತ್ತದೆ ಎನ್ನಲಾಗಿದೆ.

ಈ ಬಗ್ಗೆ  ಕಾಪು ಪೊಲೀಸ್‌ ಠಾಣೆಯಲ್ಲಿ.  ಕಲಂ 160  ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ

error: No Copying!