ಮಣಿಪಾಲ: ದಿನಾಂಕ: 08-04-2024 (ಹಾಯ್ ಉಡುಪಿ ನ್ಯೂಸ್) ಮಣಿಪಾಲ – ಪೆರಂಪಳ್ಳಿ ರಸ್ತೆಯಲ್ಲಿರುವ ಬಾರ್ ಒಂದಕ್ಕೆ ನಡು ರಾತ್ರಿ ದಾಳಿ ನಡೆಸಿದ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿವಿ ಅವರು ಡಿ.ಜೆ ಸೌಂಡ್ ಸಿಸ್ಟಮ್ ಅನ್ನು ವಶಪಡಿಸಿಕೊಂಡು ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ
ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿವಿ ಅವರು ದಿನಾಂಕ: 07/04/2024 ರಂದು ರಾತ್ರಿ ನೈಟ್ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ, ಮಣಿಪಾಲ – ಪೆರಂಪಳ್ಳಿ ರಸ್ತೆಯ ಬಳಿ ಇರುವ Ecstasy ಬಾರ್ & ರೆಸ್ಟೋರೆಂಟ್‌ನಲ್ಲಿ ಡಿ.ಜೆ ಮ್ಯೂಸಿಕ್ ಹಾಕಿ ಪಾರ್ಟಿ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ಠಾಣೆಯ ಸಿಬ್ಬಂದಿಯವರೊಂದಿಗೆ ನಡು ರಾತ್ರಿ Ecstasy ಬಾರ್ & ರೆಸ್ಟೋರೆಂಟ್‌ಗೆ ತೆರಳಿದಾಗ ಅಲ್ಲಿ ಜೋರಾಗಿ ಡಿ ಜೆ ಮ್ಯೂಸಿಕ್ ಹಾಕಿರುವುದು ಕಂಡು ಬಂದಿದ್ದು, ಆ ಬಾರ್ ಎಂಡ್ ರೆಸ್ಟೋರೆಂಟ್‌ನ ವ್ಯವಸ್ಥಾಪಕ ಮಿಥುನ್ ಕುಮಾರ್ ರವರಲ್ಲಿ ವಿಚಾರಿಸಿದಾಗ ಬಾರ್‌ನ ಮಾಲಕ ದಿನೇಶ್ ಬಿ. ರವರಲ್ಲಿ ಅನುಮತಿ ಪಡೆದುಕೊಂಡು ಬಾರ್‌ನಲ್ಲಿ ಡಿ ಜೆ ಮ್ಯೂಸಿಕ್ ಹಾಕಿರುವುದಾಗಿ ತಿಳಿಸಿರುತ್ತಾರೆ ಎನ್ನಲಾಗಿದೆ.
Ecstasy ಬಾರ್ & ರೆಸ್ಟೋರೆಂಟ್‌ನ ವ್ಯವಸ್ಥಾಪಕರಾದ ಮಿಥುನ್ ಕುಮಾರ್ ಮತ್ತು ಮಾಲೀಕರಾದ ದಿನೇಶ್ ಬಿ. ಅವರು ಅಬಕಾರಿ ಇಲಾಖೆಯ ಲೈಸನ್ಸ್ ಷರತ್ತುಗಳನ್ನು ಉಲ್ಲಂಘಿಸಿ ಯಾವುದೇ ಅನುಮತಿ ಇಲ್ಲದೇ ಡಿಜೆ ಮ್ಯೂಸಿಕ್ ಹಾಕಿದ್ದಾರೆ ಎನ್ನಲಾಗಿದೆ.
Ecstasy ಬಾರ್ ಎಂಡ್ ರೆಸ್ಟೋರೆಂಟ್‌ನಲ್ಲಿ ಡಿಜೆ ಮ್ಯೂಸಿಕ್ ಹಾಕಲು ಬಳಸಿದ hp ಕಂಪನಿಯ ಲ್ಯಾಪ್‌ಟಾಪ್- 1, ಮ್ಯೂಸಿಕ್ ಪರಿಕರಗಳಾದ Yamaha ಕಂಪನಿಯ Mixing Console MG10XU -1, Pioneer Dj Console -ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ,
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 103(B)(i), 104 ಕೆ.ಪಿ. ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.