Spread the love
  • ಅಜೆಕಾರು: ದಿನಾಂಕ:07–04-2024(ಹಾಯ್ ಉಡುಪಿ ನ್ಯೂಸ್) ಬಜಗೋಳಿ -ಕೆರ್ವಾಶೆ ರಸ್ತೆಯಲ್ಲಿ  ಮರಳು ಕಳ್ಳತನ ನಡೆಸುತ್ತಿದ್ದವರನ್ನು ಅಜೆಕಾರು ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ರವಿ ಬಿಕೆ ಅವರು ಬಂಧಿಸಿದ್ದಾರೆ
  • ಅಜೆಕಾರು ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ರವಿ ಬಿ.ಕೆ ಅವರು ಪಿಎಸ್‌ಐ ಲಕ್ಷ್ಮಣ ಮತ್ತು ಸಿಬ್ಬಂದಿಯವರೊಂದಿಗೆ ದಿನಾಂಕ 06/04/2024 ರಂದು ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ಗರಡಿ ಬಳಿ ಬಜಗೋಳಿ – ಕೆರ್ವಾಸೆ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಬಜಗೋಳಿ ಕಡೆಯಿಂದ ಬರುತ್ತಿದ್ದ ಕೆಎ- 20 ಸಿ- 3207 ನೇ 407 ಟೆಂಪೋ ವನ್ನು ನಿಲ್ಲಿಸಿ ನೋಡಿದಾಗ ಅದರಲ್ಲಿ ಮರಳು ಮಿಶ್ರಿತ ಚರಳು ತುಂಬಿಸಿದ್ದು ಕಂಡು ಬಂದಿದೆ ಎನ್ನಲಾಗಿದೆ.
  • ಈ ಬಗ್ಗೆ ಚಾಲಕನಲ್ಲಿ ವಿಚಾರಣೆ ನಡೆಸಿದಾಗ ವಾಹನದಲ್ಲಿದ್ದ ಮರಳು ಮಿಶ್ರಿತ ಚರಳನ್ನು ಕೆರ್ವಾಶೆ ಗ್ರಾಮದ ಬಟ್ಟ ಎಂಬ ಸ್ಥಳದಿಂದ ಕಳವು ಮಾಡಿ, ಆರೋಪಿತರು ಸರಕಾರದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸ್ವಂತ ಲಾಭಕ್ಕೋಸ್ಕರ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ವಾಹನದಲ್ಲಿದ್ದವರನ್ನು ವಿಚಾರಿಸಿದಾಗ ಚಾಲಕ ದರ್ಮರಾಜ ಮತ್ತು ಜೊತೆಯಲ್ಲಿದ್ದವರು ಸಂಜೀವ , ರಮೇಶ ಎಂಬುದಾಗಿ ತಿಳಿಸಿರುತ್ತಾರೆ. ಟೆಂಪೋದಲ್ಲಿದ್ದ ಸುಮಾರು 1 ಯುನಿಟ್‌ ಮರಳು ಮಿಶ್ರಿತ ಚರಳು ಅಂದಾಜು ಮೌಲ್ಯ ರೂ 2,000/- , ರಬ್ಬರ್‌ ಬುಟ್ಟಿ -3 ಅಂದಾಜು ಮೌಲ್ಯ 150/- , ಕಬ್ಬಿಣದ ಹಾರೆ-3 ಅಂದಾಜು ಮೌಲ್ಯ ರೂ. 300/- ಇವುಗಳನ್ನು  ಸ್ವಾಧೀನಪಡಿಸಿಕೊಂಡಿದ್ದಾರೆ.
  • ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಕಲಂ 379 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!