Spread the love

ಕಟಪಾಡಿ: ದಿನಾಂಕ: 05-04-2024 (ಹಾಯ್ ಉಡುಪಿ ನ್ಯೂಸ್) ಕಟಪಾಡಿ ತ್ರಿಶಾ ಕಾಲೇಜಿನಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿ ಚುನಾವಣಾ ಪ್ರಚಾರ ನಡೆಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

  • 2024 ನೇ ಲೋಕಸಭಾ ಚುನಾವಣೆಯ ಬಗ್ಗೆ 121-ಕಾಪು ವಿಧಾನ ಸಭಾ ವ್ಯಾಪ್ತಿಯ ಎಫ್.ಎಸ್.ಟಿ-2 ನ ಅಧಿಕಾರಿಯಾಗಿ ವಿಶ್ವನಾಥ್ ಅವರು ಜಿಲ್ಲಾ ಚುನಾವಣಾಧಿಕಾರಿಯವರಿಂದ ನೇಮಿಸಲ್ಪಟ್ಟಿದ್ದಾರೆ.
  • ದಿನಾಂಕ:  30.03.2024 ರಂದು  ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಬೆಳಿಗ್ಗೆ 11:30 ಗಂಟೆಯ ಸುಮಾರಿಗೆ ಏಣಗುಡ್ಡೆ ಗ್ರಾಮದ, ಕಟಪಾಡಿ ತ್ರಿಶಾ ಕಾಲೇಜಿನ ಕಾಂಪೌಂಡಿನ ಒಳಗಡೆ  ಕಾಪು ವಿಧಾನ ಸಭಾ ಕ್ಷೇತ್ರದ ಎಂ.ಎಲ್.ಎ ಗುರ್ಮೆ ಸುರೇಶ್‌ ಶೆಟ್ಟಿ ಹಾಗೂ ಮಾಜಿ ಎಂ.ಎಲ್.ಎ ಲಾಲಾಜಿ ಆರ್‌ ಮೆಂಡನ್‌ ರವರಿಗೆ ತ್ರಿಶಾ ಕಾಲೇಜಿನ ಆಡಳಿತ ಮಂಡಳಿಯವರು ಮಾತನಾಡಲು ಹ್ಯಾಂಡ್‌ ಮೈಕ್‌ ನ್ನು ನೀಡಿದ್ದು, ಅಲ್ಲದೇ ಕಾಲೇಜಿನ ಒಳಭಾಗದಲ್ಲಿ ಮತ್ತು ಕಾಲೇಜಿನ 2 ಮಹಡಿಯ ಕಾರಿಡರ್‌ ನಲ್ಲಿ ವಿದ್ಯಾರ್ಥಿಗಳಿಗೆ ನಿಲ್ಲಲು ಅನುವು ಮಾಡಿಕೊಟ್ಟಿದ್ದು, ಇದನ್ನು ಬಳಸಿಕೊಂಡ ಕೋಟಾ ಶ್ರೀನಿವಾಸ ಪೂಜಾರಿಯವರು ಮೈಕ ನ್ನು ಹಿಡಿದುಕೊಂಡು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿ ಪ್ರಚಾರ ನಡೆಸಿರುತ್ತಾರೆ ಎಂದು ದೂರಲಾಗಿದೆ.
  • ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ  ಕಲಂ 171(B), 171(C) ಐ.ಪಿ.ಸಿ ಮತ್ತು 123(1)(A) R P Act ನಂತೆ  ಪ್ರಕರಣ ದಾಖಲಾಗಿದೆ.
error: No Copying!