- ಪಡುಬಿದ್ರಿ: ದಿನಾಂಕ :05-04-2024(ಹಾಯ್ ಉಡುಪಿ ನ್ಯೂಸ್) ಪೇಟೆ ಕೆರೆ ಪರಿಸರದಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಒಂಭತ್ತು ಜನರನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರಸನ್ನ ಎಂ.ಎಸ್ ಅವರು ಬಂಧಿಸಿದ್ದಾರೆ.
- ಪಡುಬಿದ್ರಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಪ್ರಸನ್ನ ಎಂ.ಎಸ್ ಅವರು ದಿನಾಂಕ :31-03-2024 ರಂದು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಬಡಾ ಎರ್ಮಾಳು ಗ್ರಾಮದ ಪೇಟೆಕೆರೆ ಬಬ್ಬುಸ್ವಾಮಿ ದೈವಸ್ಥಾನದ ಹತ್ತಿರದ ಖಾಲಿ ಜಾಗದಲ್ಲಿ ಕೆಲವು ವ್ಯಕ್ತಿಗಳು ಸೇರಿ ಕೋಳಿಗಳ ಕಾಲಿಗೆ ಬಾಳುಕಟ್ಟಿ, ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿರುವುದಾಗಿ ಬಂದ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ ಜೂಜಾಟ ಆಡುತ್ತಿದ್ದ ಸುರೇಂದ್ರ , ಮಹೇಶ್, ಗಣೇಶ್ , ಉಮೇಶ್ , ಶ್ರೀಕಾಂತ್ , ಸಂತೋಷ , ರಾಜೇಂದ್ರ, ರಾಮ ವೈ , ಯೋಗೀಶ್ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು, ಈ ವೇಳೆ ಕೆಲವರು ಅಲ್ಲಿಂದ ಓಡಿ ಹೋಗಿರುತ್ತಾರೆ ಎನ್ನಲಾಗಿದೆ.
- ಬಂಧಿತ ಆರೋಪಿತರ ವಶದಿಂದ ನಗದು 1,600/- ರೂ, ಜೀವಂತ ಕೋಳಿಗಳು-14 , ಸಣ್ಣ ಕತ್ತಿ, ದಾರಗಳು, 12 ಮೋಟಾರ್‌ಸೈಕಲ್‌ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
- ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 87,93 ಕೆ.ಪಿ. ಕಾಯ್ದೆ, ಮತ್ತು ಕಲಂ: 11(1)(d) prevention of Cruelty to Animal Act-1960 ರಂತೆ ಪ್ರಕರಣ ದಾಖಲಾಗಿದೆ.