- ಕುಂದಾಪುರ: ದಿನಾಂಕ 25/03/2024 (ಹಾಯ್ ಉಡುಪಿ ನ್ಯೂಸ್) ಹೆಸ್ಕತ್ತೂರು ಹಾಡಿಯಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಆರು ಜನರನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಭೀಮಾ ಶಂಕರ ಸಿನ್ನೂರ ಸಂಗಣ್ಣ ಅವರು ಬಂಧಿಸಿದ್ದಾರೆ.
- ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರಿಗೆ ದಿನಾಂಕ:23-03-2024 ರಂದು ಹೆಸ್ಕತ್ತೂರು ಗ್ರಾಮದ ಹೆಸ್ಕತ್ತೂರು ಪ್ರೌಢ ಶಾಲೆಯ ಎದುರುಗಡೆ ಇರುವ ಹಾಡಿಯಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಆಟವಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ದಾಳಿ ನಡೆಸಿ 1) ಸುಧಾಕರ, 2) ಸಂತೋಷ, 3) ಹನುಮಂತ, 4) ವಿಜಯ್ ಕುಮಾರ್, 5) ಶೇಷಾದ್ರಿ, 6) ರವಿ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
- ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ್ದ ನಗದು 2,900/-, ಹಸಿರು ಬಣ್ಣದ ಪ್ಲಾಸ್ಟಿಕ್, ಕ್ಯಾಂಡಲ್, ಇಸ್ಪೀಟ್ ಎಲೆಗಳು, KA-20-EQ-4706, KA-20-HC-3268, KA-20-EB-8661, KA-20-EV-2156, KA-20-EY-6418 ಮೋಟಾರು ಸೈಕಲ್‌ಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
- ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.