Spread the love

ಶಂಕರನಾರಾಯಣ: ದಿನಾಂಕ 25/03/2024(ಹಾಯ್ ಉಡುಪಿ ನ್ಯೂಸ್) ಪೇಟೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಶಂಕರನಾರಾಯಣ ಪೊಲೀಸ್‌ ಠಾಣೆಯ ಪೊಲೀಸ್  ಉಪನಿರೀಕ್ಷಕರಾದ ನಾಸಿರ್ ಹುಸೇನ್ ಅವರು ಬಂಧಿಸಿದ್ದಾರೆ.

ಶಂಕರ ನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಅವರಿಗೆ ದಿನಾಂಕ:24-03-2024 ರಂದು ಠಾಣೆಯ ವ್ಯಾಪ್ತಿಯಲ್ಲಿ ಬೆಳಿಗ್ಗೆ ಇಬ್ಬರು ವ್ಯಕ್ತಿಗಳು ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ತೆರಳಿದಾಗ ಅಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದ ರೀತಿಯಲ್ಲಿ ಮೋಟಾರು ಸೈಕಲ್ ನಿಲ್ಲಿಸಿಕೊಂಡು ನಿಂತುಕೊಂಡಿದ್ದರು ಎನ್ನಲಾಗಿದೆ .

ಪೊಲೀಸ್ ವಾಹನವನ್ನು ನೋಡಿ ಇಬ್ಬರೂ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದು, ಪೊಲೀಸರು ಅವರನ್ನು ಹಿಡಿದು ವಿಚಾರಿಸಿದಾಗ 1.ಮಾಧವ, 2. ಅರವಿಂದ ಎಂಬುವುದಾಗಿ ತಿಳಿಸಿರುತ್ತಾರೆ ಎನ್ನಲಾಗಿದೆ.

ಪೊಲೀಸರು ಆವರ ಅಂಗ ಜಪ್ತಿ ಮಾಡಿದಾಗ ಮಾಧವ ಎಂಬಾತನ ಬಳಿ ಇದ್ದ ಒಂದು ಹ್ಯಾಂಡ್ ಬ್ಯಾಗ್ ನಲ್ಲಿ ಇರುವ ಪ್ಲಾಸ್ಟಿಕ್ ಕವರ್ ನಲ್ಲಿ ಒಣಗಿದ ಗಾಂಜಾವನ್ನು ತೆಗೆದು ತೋರಿಸಿದ್ದು. ಅದರಲ್ಲಿ ಒಣಗಿದ ಎಲೆ,ಕಾಂಡ, ಮೊಗ್ಗು ,ಹೂ ಗಳು ಮತ್ತು ಬೀಜ ಇದ್ದಿದ್ದು ಅದರ ವಾಸನೆಯಿಂದ ಗಾಂಜಾ ಎಂಬುದಾಗಿ ದೃಢಪಟ್ಟಿದ್ದು, ಅಲ್ಲದೇ ಕವರಿನಲ್ಲಿರುವ ಒಣಗಿದ ಎಲೆಗಳ ಬಗ್ಗೆ ವಿಚಾರಿಸಿದಾಗ ಆತನು ಇದು ಗಾಂಜಾವಾಗಿದ್ದು, ಗ್ರಾಹಕರಿಗೆ ಮಾರಾಟ ಮಾಡಲು ಇಲ್ಲಿಗೆ ಬಂದಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಗಾಂಜಾವನ್ನು ಮುಂದಿನ ತನಿಖೆಯ ಬಗ್ಗೆ ತೂಕ ಮಾಡಿದ್ದು 82 ಗ್ರಾಂ ಇರುತ್ತದೆ. ಅದರ ಅಂದಾಜು ಮೌಲ್ಯ 3,750/- ರೂಪಾಯಿ ಆಗಿರುತ್ತದೆ ಎನ್ನಲಾಗಿದೆ. ಮೋಟಾರು ಸೈಕಲ್ ಬಜಾಜ್ ಕಂಪನಿಯ KA-18-W-9455 ನಂಬ್ರದ ಡಿಸ್ಕವರ್ ಎಂದು ಬರೆದಿರುವ ನಸು ಕೆಂಪು ಬಣ್ಣದ ಮೋಟಾರ್ ಸೈಕಲ್ ಆಗಿರುತ್ತದೆ. ಗಾಂಜಾದ ಬಗ್ಗೆ ವಿಚಾರಿಸಿದಾಗ ಈಶ್ವರ ನಗರದ ಶಂಕರ ಎಂಬಾತ ನೀಡಿರುವುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಕಲಂ: 8 (ಸಿ), 20 (ಬಿ) (ii) (ಎ) ಎನ್.ಡಿ.ಪಿ.ಎಸ್. ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿದೆ.

error: No Copying!