Spread the love
  • ದಿನಾಂಕ:23-03-2024(ಹಾಯ್ ಉಡುಪಿ ನ್ಯೂಸ್) ಅಜ್ರಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ವನನ್ನು ಶಂಕರನಾರಾಯಣ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ನಾಸಿರ್ ಹುಸೇನ್ ಅವರು ಬಂಧಿಸಿದ್ದಾರೆ.
  • ದಿನಾಂಕ. 22.03.2024 ರಂದು ಬೆಳಿಗ್ಗೆ ಅಜ್ರಿ ಗ್ರಾಮದ ನಿವಾಸಿ ಆರೋಪಿ ಶಂಕರ (58) ಎಂಬಾತನು ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಆಜ್ರಿ ಮೂರಕೈ ಬಳಿ ಇರುವ ಸಾರ್ವಜನಿಕ ಬಸ್ಸು ನಿಲ್ದಾಣದ ಒಳಗಡೆ ಕುಳಿತುಕೊಂಡು  ಅಕ್ರಮವಾಗಿ ಶರಾಬು ಸೇವನೆ ಮಾಡುತ್ತಿದ್ದಾನೆ ಎಂಬ  ಖಚಿತ ಮಾಹಿತಿಯಂತೆ  ಶಂಕರನಾರಾಯಣ   ಪೊಲೀಸ್  ಠಾಣೆಯ ಪಿಎಸ್ಐ ಯವರಾದ ನಾಸಿರ್ ಹುಸೇನ್ ಅವರು  ಕೂಡಲೇ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.
  • , ಆತನ ವಶದಲ್ಲಿದ್ದ ಪ್ಲಾಸ್ಟಿಕ್ ಲೋಟ, ಶರಾಬು ಮಿಶ್ರಣ ಮಾಡಿರುವ ನೀರಿನ ಪ್ಲಾಸ್ಟಿಕ್ ಬಾಟಲಿ-1.  Original choice whisky 90 ml  ನ ಸ್ಯಾಚೆಟ್ -2 ಹಾಗೂ Original choice whisky 90 ml  ನ ಖಾಲಿ  ಸ್ಯಾಚೆಟ್-2ಅದನ್ನು ವಶಪಡಿಸಿಕೊಂಡಿದ್ದು ಈ ಬಗ್ಗೆ ಶಂಕರನಾರಾಯಣ  ಪೊಲೀಸ್‌ ಠಾಣೆಯಲ್ಲಿ ಕಲಂ  15 (ಎ) ಕರ್ನಾಟಕ  ಅಬಕಾರಿ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿದೆ.
error: No Copying!