Spread the love

ಉಡುಪಿ : ದಿನಾಂಕ:19-03-2024 (ಹಾಯ್ ಉಡುಪಿ ನ್ಯೂಸ್)

ಜಿಲ್ಲಾ ಆಸ್ಪತ್ರೆಗೆ ನೇಮಕಗೊಂಡ ನೂತನ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಅಶೋಕ್ ಎಚ್ ಅವರಿಗೆ ಕರವೇ ಉಡುಪಿ ಜಿಲ್ಲಾ ಘಟಕದ ವತಿಯಿಂದ ದಿನಾಂಕ :18-03-2024ರಂದು ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಅವರ ನೇತೃತ್ವದ ತಂಡ ಹೂ ಗುಚ್ಚ ನೀಡಿ ಅವರನ್ನು ಅಭಿನಂದಿಸಿದರು.

ಕರವೇ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ರವರು ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ  ಜಿಲ್ಲಾ ಸರ್ಜನ್ ರವರ ಗಮನ ಸೆಳೆದರು . ಆಸ್ಪತ್ರೆಯ ಆವರಣ ಮತ್ತು ಒಳಗಡೆ ಕನ್ನಡ ಬಳಕೆ ಮತ್ತು ಕನ್ನಡ ನಾಮಫಲಕಗಳನ್ನು ಹಾಕಬೇಕು ಹಾಗೂ ಆಸ್ಪತ್ರೆಗೆ ಆಗಮಿಸುವ ಎಲ್ಲಾ ರೋಗಿಗಳಿಗೂ ಉತ್ತಮವಾದ ಚಿಕಿತ್ಸೆ ಹಾಗೂ ಅತ್ಯುತ್ತಮವಾದ ವಾತಾವರಣವನ್ನು ಕಲ್ಪಿಸಬೇಕೆಂದು ಹೇಳಿದರು .

ಜಿಲ್ಲಾ ಶಸ್ತ್ರಚಿಕಿತ್ಸಕ ರಾದ ಅಶೋಕ್ ಎಚ್ ರವರು ನಾನು ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವವರೆಗೂ ಉತ್ತಮವಾದ ಸೇವೆಯನ್ನು ನೀಡುತ್ತೇನೆ ಎಂದು ಕರವೇ ಉಡುಪಿ ಜಿಲ್ಲಾಧ್ಯಕ್ಷರಿಗೆ ಹೇಳಿದರು.

ಕರವೇ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಮಹಿಳಾ ಜಿಲ್ಲಾಧ್ಯಕ್ಷರಾದ ಗೀತಾ ಪಾಂಗಾಳ, ಮಹಿಳಾ ಉಪಾಧ್ಯಕ್ಷರಾದ ದೇವಕಿ ಬಾರ್ಕೂರು ಮಹಿಳಾ ಪ್ರಧಾನ ಕಾರ್ಯದರ್ಶಿ ಜ್ಯೋತಿ, ಮಹಿಳಾ ಕಾರ್ಯದರ್ಶಿಯಾದ ಚಂದ್ರಕಲಾ ,ಜಿಲ್ಲಾ ಕಾರ್ಯದರ್ಶಿ ಸಿದ್ದಣ್ಣ ಎಸ್ ಪೂಜಾರಿ, ಸಹ ಸಂಘಟನೆ ಕಾರ್ಯದರ್ಶಿಯಾದ ಗೋಪಾಲ್ ದೊರೆ, ತಾಲೂಕು ಉಪಾಧ್ಯಕ್ಷರಾದ ಪವಿತ್ರ ಶೆಟ್ಟಿ ಮತ್ತು ಜಿಲ್ಲಾ ಸದಸ್ಯರಾದ ದಾಮೋದರ್ ಬಂಗೇರ ಮತ್ತು ರಾಜಕುಮಾರ್ ,ಅಶೋಕ್ ರಾವ್ ಶೆಟ್ಟಿಗಾರ್  ಮತ್ತು ಸರ್ವ ಸದಸ್ಯರು  ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: No Copying!