ಪಡುಬಿದ್ರಿ: ದಿನಾಂಕ:16-03-2024(ಹಾಯ್ ಉಡುಪಿ ನ್ಯೂಸ್) ವಿದೇಶದಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ನಂಬಿಸಿ ಯುವಕನೋರ್ವನಿಗೆ 4.5ಲಕ್ಷ ವಂಚಿಸಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಪು ತಾಲೂಕು ಹೆಜಮಾಡಿ ಗ್ರಾಮದ ನಿವಾಸಿ ರೆನಿಲ್ಲಾ ಡಿಸೋಜ (66) ಎಂಬವರ ಮಗ ಕ್ರಿಸ್ಟನ್ ಡಿಸೋಜ ಎಂಬುವವರಿಗೆ ದಿನಾಂಕ 07/10/2023 ರಿಂದ ದಿನಾಂಕ 08/02/2024 ರವರೆಗೆ ಬೇರೆ ಬೇರೆ ದಿನಗಳಲ್ಲಿ ಅವರ ಮೊಬೈಲ್ ನಂಬರಿಗೆ ಗ್ಲೋಬಲ್ ಕೆರಿಯರ್ ಸೊಲ್ಯೂಶನ್ ಎಂಬ ಕಂಪೆನಿಯ ಹೆಸರಿನಲ್ಲಿ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಿತ್ ಮತ್ತು ಸುಭಾಸ್ ಎಂಬವರು ಒಟ್ಟು 3 ನಂಬ್ರಗಳಿಂದ ಪರಿಚಯಿಸಿ ಕೊಂಡು, ಕರೆ ಮಾಡಿ ರೆನಿಲ್ಲಾ ಡಿಸೋಜ ರವಚರ ಮಗನಿಂದ ಹಣವನ್ನು ಕೇಳಿ ಗೂಗಲ್ ಪೇ ಮೂಲಕ ಒಟ್ಟು ರೂಪಾಯಿ 4,42,645/- ಹಣವನ್ನು ಪಡೆದು, ಉದ್ಯೋಗ ದೊರಕಿಸದೇ ಮತ್ತು ಹಣವನ್ನು ವಾಪಾಸ್ಸು ನೀಡದೇ ಮೋಸ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ರೆನಿಲ್ಲಾ ಡಿಸೋಜ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 406, 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.