- ಮಣಿಪಾಲ: ದಿನಾಂಕ 16/03/2024 (ಹಾಯ್ ಉಡುಪಿ ನ್ಯೂಸ್) ಈಶ್ವರ ನಗರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ ಇಬ್ಬರು ಯುವಕರನ್ನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾದ ದೇವರಾಜ್ ಟಿವಿ ರವರು ಬಂಧಿಸಿದ್ದಾರೆ.
- ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷರಾದ ದೇವರಾಜ್‌ಟಿ ವಿ ರವರು ದಿನಾಂಕ :10-03-2024 ರಂದು ಮಧ್ಯಾಹ್ನ ಠಾಣಾ ಸಿಬ್ಬಂದಿ ಎ ಎಸ್‌ಐ ವಿವೇಕಾನಂದ, ಹೆಚ್‌ಸಿ ಥಾಮ್ಸನ್, ಪಿಸಿ ಚೆನ್ನೇಶ್‌ರವರ ಜೊತೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಣಿಪಾಲ ಠಾಣಾ ವ್ಯಾಪ್ತಿಯ ಈಶ್ವರ್ ನಗರದ ಆಶ್ಲೇಶ್ ಹೊಟೇಲ್ ಮುಂಬಾಗದ ಸಾರ್ವಜನಿಕ ಸ್ಥಳದಲ್ಲಿ ಸಹಾದ್ (24) ಕುಂಜಿಬೆಟ್ಟು ಉಡುಪಿ ಎಂಬವ ಹಾಗೂ ಅಬ್ದುಲ್ ಸಮಾದ್ (31) ಎಂಬವನು ಅಮಲಿನಲ್ಲಿದ್ದು, ಇವರಿಬ್ಬರೂ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ ಬಂಧಿಸಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ ಎನ್ನಲಾಗಿದೆ.
- ಇವರೀರ್ವರು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕೆ ಎಂ ಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ ಎಂಬುದಾಗಿ ಮಣಿಪಾಲ ಕೆ ಎಂ ಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 15/03/2024 ರಂದು ದೃಢಪತ್ರವನ್ನು ನೀಡಿರುತ್ತಾರೆ ಎನ್ನಲಾಗಿದೆ.
- ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿದೆ.