ಬೈಂದೂರು: ದಿನಾಂಕ :13/03/2024 (ಹಾಯ್ ಉಡುಪಿ ನ್ಯೂಸ್) ಬೈಂದೂರು ಕಡೆಗೆ ಕಾರಿನಲ್ಲಿ ಜಾನುವಾರು ಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ಕಾರನ್ನು ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ತಿಮ್ಮೇಶ್ ಬಿಎನ್ ಅವರು ವಶಪಡಿಸಿಕೊಂಡಿದ್ದಾರೆ.
ಬೈಂದೂರು ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿಎನ್ ಅವರಿಗೆ ದಿನಾಂಕ:12/03/2024 ರಂದು ಶಿರೂರು ಕಡೆಯಿಂದ ಬೈಂದೂರು ಕಡೆಗೆ KA-21-Z-4582 ಸಿಲ್ವರ್ ಬಣ್ಣದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ದನ ಸಾಗಿಸುತ್ತಿದ್ದಾರೆ ಎಂಬುದಾಗಿ ಗುಪ್ತ ಮಾಹಿತಿ ಬಂದ ಮೇರೆಗೆ ಯಡ್ತರೆ ಜಂಕ್ಷನ್ ನಲ್ಲಿ ಕಾರಿಗಾಗಿ ಕಾಯುತ್ತಿದ್ದಾಗ ಬೆಳಿಗ್ಗಿನ ಜಾವ ಶಿರೂರು ಕಡೆಯಿಂದ ಕುಂದಾಪುರ ಕಡೆಗೆ KA-21-Z-4582 ಸಿಲ್ವರ್ ಬಣ್ಣದ ಮಾರುತಿ ಸ್ವಿಫ್ಟ್ ಕಾರು ಬಂದಿದ್ದು ತಿಮ್ಮೇಶ್ ಅವರು ನಿಲ್ಲಿಸಲು ಸೂಚನೆ ನೀಡಿದಾಗ ಕಾರನ್ನು ಚಾಲಕನು ನಿಲ್ಲಿಸದೇ ಮುಂದೆ ಹೋಗಿರುತ್ತಾನೆ ಎನ್ನಲಾಗಿದೆ.
ಪೊಲೀಸರು ಕಾರನ್ನು ಬೆನ್ನಟ್ಟಿದ್ದು ಕಾರು ಚಾಲಕನು ಅರೆಹೊಳೆ ಕ್ರಾಸ್ ನಲ್ಲಿ ಎಡಕ್ಕೆ ತಿರುಗಿ ನಾವುಂದ ಗ್ರಾಮದ ಕುದ್ರುಕೋಡು ಎಂಬಲ್ಲಿ ಹೋಗುವಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿ ಕಾರಿನ ಟಯರ್ ಪಂಚರ್ ಆಗಿ ಕಾರು ನಿಂತಿದ್ದು ಕಾರಿನಲ್ಲಿದ್ದ ಚಾಲಕ ಹಾಗೂ ಇತರ ಇಬ್ಬರು ಓಡಿ ಹೋಗಿರುತ್ತಾರೆ ಎನ್ನಲಾಗಿದೆ.
ಕಾರನ್ನು ಹಾಗೂ ಕಾರಿನಲ್ಲಿದ್ದ 3 ಹಸುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 379 ಐಪಿಸಿ ಮತ್ತು ಕಲಂ: 4,5,7,12 Karnataka Prevention of Slaughter & prevention of cattle ordinance 202 & U/s 11(1) (D) ,Prevention of cruelty to Animals Act 1960 And 66 R/w 192 (A) IMV Act ರಂತೆ ಪ್ರಕರಣ ದಾಖಲಾಗಿದೆ .