Spread the love

ಉಡುಪಿ: ದಿನಾಂಕ: 12-03-2024(ಹಾಯ್ ಉಡುಪಿ ನ್ಯೂಸ್)  ಬೆಳ್ಳಿ ಆಭರಣಗಳ ಅಂಗಡಿಯ ಮಾಲೀಕರಿಗೆ ಅಂಗಡಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾತ ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ , ಒಳಕಾಡು ನಿವಾಸಿ ಲತಿಕಾ (36) ಎಂಬವರು ಉಡುಪಿ ತಾಲೂಕಿನ 76 ಬಡಗುಬೆಟ್ಟು ಗ್ರಾಮದ ಒಳಕಾಡು ಎಂಬಲ್ಲಿ ತನುಜಾ ಸಿಲ್ವರ್ ವರ್ಕ್ಸ್ ಎಂಬ ಬೆಳ್ಳಿಯ ಆಭರಣಗಳ ಅಂಗಡಿಯನ್ನು ನಡೆಸಿಕೊಂಡಿದ್ದು ಆರೋಪಿ ವಿಶಾಲ್ ಎಂಬಾತನು ಲತಿಕಾರವರ ಅಂಗಡಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದನು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ: 25/09/2023 ರಂದು ಲತಿಕಾರವರಿಗೆ ಅನುಮಾನ ಬಂದು ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಮ್ಯಾನೇಜರ್  ವಿಶಾಲನು 17 ಲಕ್ಷ ರೂಪಾಯಿ ಮೌಲ್ಯದ 25 ಕೆಜಿ 980 ಗ್ರಾಂ ತೂಕದ ಬೆಳ್ಳಿಯನ್ನು ಮೋಸ ಮಾಡಿ ಆರ್ಥಿಕ ನಷ್ಟ ಉಂಟು ಮಾಡಿರುವುದಲ್ಲದೇ ವಿಶ್ವಾಸ ದ್ರೋಹವೆಸಗಿರುವುದು ತಿಳಿಯುತ್ತದೆ.

ಈ ಬಗ್ಗೆ ದೂರವಾಣಿ ಕರೆ ಮಾಡಿ ವಿಶಾಲನನ್ನು ವಿಚಾರಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡು 10 ಲಕ್ಷ ರೂಪಾಯಿಯನ್ನು ಲತಿಕಾರವರಿಗೆ  ಪಾವತಿ ಮಾಡಿದ್ದು, ನಂತರ ಉಳಿದ ಹಣವನ್ನು ಕೇಳಿದಾಗ ತಾನು ಯಾವುದೇ ಹಣ ಕೊಡಲಿಕ್ಕಿಲ್ಲವೆಂತಲೂ, ಪಾವತಿಸಿದ 10 ಲಕ್ಷ ಹಣವನ್ನು ಹಿಂತಿರುಗಿಸಬೆಂಕೆಂದೂ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಲತಿಕಾ ರವರು ನ್ಯಾಯಾಲಯ ದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ:403, 406, 408, 417, 418, 419, 420, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!