Spread the love

ಉಡುಪಿ: ದಿನಾಂಕ: 12-03-2024(ಹಾಯ್ ಉಡುಪಿ ನ್ಯೂಸ್)

ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆಯ ಮಹಿಳಾ ಜಿಲ್ಲಾಧ್ಯಕ್ಷರಾದ ಗೀತಾ ಪಾಂಗಳ ರವರ ನೇತೃತ್ವದಲ್ಲಿ ದಿನಾಂಕ :10-03-2024 ರಂದು ಮಹಿಳಾ ದಿನಾಚರಣೆ ನಡೆಯಿತು.

ಈ ಸಭೆಗೆ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ, ಉಡುಪಿ ಜಿಲ್ಲಾ ಗೌರವ ಅಧ್ಯಕ್ಷರಾದ ಸುಂದರ್. ಎ .ಬಂಗೇರ ರವರು ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಜಿಲ್ಲಾಧ್ಯಕ್ಷರಾದ ಗೀತಾ ಪಾಂಗಾಳ ರವರು ಹೆಣ್ಣು ಯಾವತ್ತು ಚಂಚಲೆ ಅಲ್ಲ. ಹೆಣ್ಣು ಮನಸು ಮಾಡಿದರೆ ಯಾವ ಕೆಲಸಕ್ಕೂ ಸಿದ್ಧ. ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಸೈಕಲ್ ನಿಂದ ಹಿಡಿದು ವಿಮಾನ ಬಿಡುವ ತನಕ ಮುಂದೆ ಇದ್ದಾರೆ. ಹಾಗಾಗಿ ಹೆಣ್ಣು ಮಕ್ಕಳನ್ನು ಯಾವತ್ತು ಗೌರವದಿಂದ ಕಾಣಬೇಕು. ಹಿಂದಿನ ಕಾಲದಲ್ಲಿ ಹೆಣ್ಣು ಮಗು ಜನನವಾದರೆ ಭ್ರೂಣ ಹತ್ಯೆ ಮಾಡುತ್ತಿದ್ದರು  ಎಂದು ಹೇಳಿ ಹಲವಾರು ಉದಾಹರಣೆಗಳನ್ನು ನೀಡಿದರು.
ಉಡುಪಿ ತಾಲೂಕು, ಮಹಿಳಾ ಅಧ್ಯಕ್ಷರಾದ ಹೆಲನ್ ಸೋನ್ಸ್ ಹಾಗೂ ಕಾಪು ಮಹಿಳಾ ಘಟಕದ ಅಧ್ಯಕ್ಷರಾದ ಶಶಿಕಲಾ ನವೀನರವರು ಕೂಡ ಹೆಣ್ಣು ಮಕ್ಕಳು ಯಾವುದರಲ್ಲೂ ಕಮ್ಮಿ ಇಲ್ಲ ಗಂಡು ಮಕ್ಕಳಿಗಿಂತ ಒಂದು ಕೈ ಮೇಲು ಎಂದು ಸಭೆಯಲ್ಲಿ ತಿಳಿಸಿದರು..
ಗೌರವಾಧ್ಯಕ್ಷರಾದ ಸುಂದರ್. ಎ. ಬಂಗೇರ ಕೂಡ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಬೇಕು.ಹೆಣ್ಣು ಮಕ್ಕಳು ಎಂದು ಯಾವ ಕಾರಣಕ್ಕೂ ಅವಮಾನಿಸಬಾರದು. ಎಂದು ಹಲವಾರು ಉದಾಹರಣೆಗಳನ್ನು ಸಭೆಯಲ್ಲಿ ತಿಳಿಸಿ ಹೇಳಿದರು.
ಮಹಿಳಾ ಕಾರ್ಯದರ್ಶಿಯಾದ ಮೋಹಿನಿ ಅವರು ಹೆಣ್ಣು ಮಕ್ಕಳ ಗೌಪ್ಯವಾದ ವಿಷಯವಿದ್ದಲ್ಲಿ ಅದನ್ನು ಗೋಪ್ಯವಾಗಿಯೇ ಇಡಬೇಕು ಹೊರತು ಅದು ಬಿಟ್ಟು ಆ ವಿಷಯದ ಬಗ್ಗೆ ಹೇಳಿ ನಿಂದಿಸಬಾರದು. ಮಹಿಳೆಯರಿಗೆ ಹಲವಾರು ಕಾನೂನಿನಿಂದ ಯಾವ ತರ ಉಪಯೋಗ ಆಗಬಹುದು ಎಂದು ಸಭೆಯಲ್ಲಿ ಬಿಡಿಸಿ ಹೇಳಿದರು.
ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರು ಮಹಿಳೆಯರಿಗೆ ಒಂದು ಶಿಬಿರವನ್ನು ಮಾಡಬೇಕು, ಮಹಿಳೆಯರಿಗೆ ಮೊದಲ ಆದ್ಯತೆ ನೀಡಬೇಕು, ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಮಹಿಳೆಯರಿಗೆ ನನ್ನ ಸಂಪೂರ್ಣವಾದ ಪ್ರೋತ್ಸಾಹ ಇದೆ, ಹೆಣ್ಣು ಮಕ್ಕಳನ್ನು ತಾಯಿ, ಅಕ್ಕ ತಂಗಿ ತರ ಗೌರವಿಸಬೇಕು ಎಂದು ಹೇಳಿದರು.
ಮಹಿಳೆಯರಿಗೆ ಆಟೋಟ ಸ್ಪರ್ಧೆ ಮಾಡಲಾಗಿದ್ದು ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಮಾರಂಭದಲ್ಲಿ ಜಿಲ್ಲಾ ಪದಾಧಿಕಾರಿಗಳು ಸರ್ವ ಸದಸ್ಯರು. ತಾಲೂಕು ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.

error: No Copying!