ಮಲ್ಪೆ: ದಿನಾಂಕ: 10-03-2024(ಹಾಯ್ ಉಡುಪಿ ನ್ಯೂಸ್) ಪಡುತೋನ್ಸೆ ನಿವಾಸಿ ವಯೋವೃದ್ಧ ರೋರ್ವರಿಗೆ ಶಶಿಕಾಂತ ಎಂಬವನು ನಿರಂತರ ಹಲ್ಲೆ ನಡೆಸುತ್ತಿರುವುದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಡುತೋನ್ಸೆ ನಿವಾಸಿ ಭೋಜ (70) ಎಂಬವರಿಗೆ ಶಶಿಕಾಂತ ಎಂಬವನು 1 ತಿಂಗಳಿನಿಂದ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಅಲ್ಲದೆ ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು ಅಲ್ಲದೆ ದಿನಾಂಕ 25/02/2024 ರಂದು ಶಶಿಕಾಂತನು ಭೋಜರಿಗೆ ಕೈಯಿಂದ ಹೊಡೆಯಲು ಬಂದಿದ್ದು ಈ ಬಗ್ಗೆ ಭೋಜರವರು ಮಲ್ಪೆ ಠಾಣೆಯಲ್ಲಿ ದೂರು ನೀಡಿರುತ್ತಾರೆ
ದಿನಾಂಕ 07/03/2024 ರಂದು ಬೆಳಿಗ್ಗೆ 9:30 ಗಂಟೆಗೆ ಭೋಜರವರಿಗೆ ಆರೋಪಿತ ಶಶಿಕಾಂತನು ಕೋಲಿನಿಂದ ಕಾಲಿಗೆ ಹೊಡೆದಿದ್ದು ಅಲ್ಲದೆ ದಿನಾಂಕ 08/03/2024 ರಂದು ಬೆಳಿಗ್ಗೆ 9:00 ಗಂಟೆಗೆ ಆರೋಪಿ ಶಶಿಕಾಂತನು ಭೋಜರವರ ಮನೆಯ ಬಳಿ ಬಂದು ಭೋಜರವರಿಗೆ ಕೋಲಿನಿಂದ ಕಾಲಿಗೆ ಬಲವಾಗಿ ಹೊಡೆದಿದ್ದು ಅಲ್ಲದೆ ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ ಎಂದು ದೂರಿದ್ದಾರೆ. ಮಾರನೇ ದಿನ ತುಂಬಾ ಕಾಲು ನೋವಿದ್ದು, ಬಾತುಕೊಂಡಿರುವುದರಿಂದ ಆಸ್ಪತ್ರೆಗೆ ಹೋಗಿ ದಾಖಲಾಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 447, 323, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.