ಬ್ರಹ್ಮಾವರ: ದಿನಾಂಕ: 09-03-2024( ಹಾಯ್ ಉಡುಪಿ ನ್ಯೂಸ್) ಪುರೋಹಿತರೋರ್ವರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಾಘವೇಂದ್ರ ಎಂಬವರು ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದಾರೆ.
- ಬ್ರಹ್ಮಾವರ,ಹೊಸೂರು ಗ್ರಾಮ, ಕರ್ಜೆ ಕಂಪ ನಿವಾಸಿ ರಾಘವೇಂದ್ರ ಎಂಬವರು ಅವರ ತಾಯಿ ರಾಧಾ ಬಾಯಿಯವರು ಮೃತಪಟ್ಟ ಬಗ್ಗೆ ದಿನಾಂಕ: 06/03/2024 ರಂದು ರಾಘವೇಂದ್ರರವರ ಮನೆಯಲ್ಲಿ ನಡೆಯುವ ತಾಯಿಯ ಕಾರ್ಯದ ಪೂಜಾ ಕೈಂಕರ್ಯವನ್ನು ಪುರೋಹಿತರಾಗಿರುವ ಬ್ರಹ್ಮಾವರ,ಹೊಸೂರು ಗ್ರಾಮದ ರಾಮಕೃಷ್ಣ ಅವರಿಗೆ ನೀಡದೇ ಬೇರೆ ಪುರೋಹಿತರಿಂದ ಮಾಡಿಸುತ್ತಿರುವಾಗ ಮಧ್ಯಾಹ್ನ 12.20 ಗಂಟೆಗೆ ರಾಮಕೃಷ್ಣನು ಏಕಾಎಕಿ ರಾಘವೇಂದ್ರ ರವರ ಮನೆಯ ಅಂಗಳಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಿ, ರಾಘವೇಂದ್ರ ರವರನ್ನು ಉದ್ದೇಶಿಸಿ ಅವಾಚ್ಯ ಶಬ್ಧಗಳಿಂದ ಜಾತಿ ನಿಂದನೆ ಮಾಡಿರುವುದಲ್ಲದೇ, ಕೈಯಿಂದ ಹೊಡೆಯಲು ಬಂದಾಗ ಅಲ್ಲಿದ್ದವರು ಬಿಡಿಸಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಅಲ್ಲದೇ ರಾಘವೇಂದ್ರ ರವರ ಇಡಿ ಸಂತಾನ ಸರ್ವನಾಶ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ:447, 504, 506 ಐಪಿಸಿ ಮತ್ತು ಕಲಂ: 3(i)(r), 3(i)(s) SC/ST ACT ನಂತೆ ಪ್ರಕರಣ ದಾಖಲಾಗಿದೆ.