ಕೋಟ: ದಿನಾಂಕ :08-03-2024(ಹಾಯ್ ಉಡುಪಿ ನ್ಯೂಸ್) ವಿದೇಶದಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ನಂಬಿಸಿ ಯುವಕನೋರ್ವನಿಗೆ 6 ಲಕ್ಷ ವಂಚನೆ ನಡೆಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರಹ್ಮಾವರ ,ಕಾರ್ಕಡ ಗ್ರಾಮ ನಿವಾಸಿ ಅಮಿತ್ (23) ಅವರಿಗೆ ದಿನಾಂಕ 10/11/2023 ರಂದು ಹಾರ್ಡ್ ರಾಕ್ ಕೆಫೆ ಎಂಬಲ್ಲಿ ಸೂರಜ್ ಎಸ್ ಶೇಖರ್ ಎಂಬುವವರು ಪರಿಚಯವಾಗಿದ್ದು ಅವರು ಅಮಿತ್ ರವರಿಗೆ ವಿದೇಶದಲ್ಲಿ ಕೆಲಸ ಕೊಡಿಸುತ್ತೇನೆ ಎಂಬುದಾಗಿ ನಂಬಿಸಿ ಅಮಿತ್ ರಿಂದ ದಿನಾಂಕ 10/11/2023 ರಿಂದ 05/03/2024 ರ ವರೆಗೆ 5,81,300/- ರೂಪಾಯಿ ಹಣವನ್ನು ಹಂತ ಹಂತವಾಗಿ ಗೂಗಲ್ ಪೇ ಹಾಗೂ ವಾಟ್ಸಆಪ್ ಮೂಲಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿರುತ್ತಾರೆ ಎಂದು ಪೊಲೀಸರಿಗೆ ದೂರಿದ್ದಾರೆ.
ಅಮಿತ್ ರವರಿಗೆ ನಂಬಿಸಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ನಂಬಿಕೆ ದ್ರೋಹ ಮಾಡಿ ಕೆಲಸವನ್ನು ಕೊಡಿಸದೇ ಹಣವನ್ನು ವಾಪಾಸ್ಸು ನೀಡದೇ ಮೋಸ ಮಾಡಿರುತ್ತಾರೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಮಿತ್ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 406,417,420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ