ಕಾರ್ಕಳ: ದಿನಾಂಕ: 08/03/2024(ಹಾಯ್ ಉಡುಪಿ ನ್ಯೂಸ್) ಪರವಾನಿಗೆ ಇಲ್ಲದೆ ಆಟೋ ರಿಕ್ಷಾದಲ್ಲಿ ಮದ್ಯ ಮಾರಾಟ ಮಾಡಲು ಸಾಗಿಸುತ್ತಿದ್ದ ಚಾಲಕನನ್ನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ದಿಲೀಪ್ ಜಿ.ಆರ್ ಅವರು ಬಂಧಿಸಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ದಿಲೀಪ್ ಜಿ.ಆರ್ ಅವರಿಗೆ ದಿನಾಂಕ:07-02-2024 ರಂದು ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಬಜಗೋಳಿ ಕಡೆಯಿಂದ ಈದು ಕಡೆಗೆ ಹೋಗುತ್ತಿದ್ದ ಅಟೋ ರಿಕ್ಷಾ ನಂಬ್ರ KA-20-AA-2707 ನನ್ನು ತಪಾಸಣೆ ನಡೆಸಿದಾಗ ಹಮೀದ್ ಸಾಹೇಬ್ ಎಂಬಾತನು ಮದ್ಯ ಮಾರಾಟ ಮಾಡಲು ಯಾವುದೇ ಪರವಾನಿಗೆ ಇಲ್ಲದೆ ಆತನ ಸ್ವಂತ ಲಾಭಕ್ಕೋಸ್ಕರ ಸಾರ್ವಜನಿಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಲು ಅಟೋರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ವಿಸ್ಕಿಯ 48 ಸ್ಯಾಚೆಟ್‌ಗಳನ್ನು, ಅಟೋ ರಿಕ್ಷಾ ಸಮೇತ ಸ್ವಾಧೀನಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.