Spread the love

ದಿನಾಂಕ: 06/03/2024(ಹಾಯ್ ಉಡುಪಿ ನ್ಯೂಸ್) ಕರ್ನಾಟಕ ಸರ್ಕಾರದ ಆದೇಶದಂತೆ ಅಂಗಡಿಗಳ ಇಂಗ್ಲಿಷ್ ನಾಮಫಲಕವನ್ನು ತೆರವು ಗೊಳಿಸಲು ಅಧಿಕಾರಿಗಳು ಎಸಿ ರೂಮ್ ನ್ನು ಬಿಟ್ಟು  ಹೊರಗೆ ಬನ್ನಿ ಎಂದು ಉಡುಪಿ ಕರವೇ ಕಾರ್ಯಕರ್ತರು ನಿನ್ನೆ ನಗರಸಭೆಯ ಮುಂದೆ ಆಗ್ರಹಿಸಿದ್ದಾರೆ.

ಕನ್ನಡ ನಾಮಫಲಕ ಜನ ಜಾಗೃತಿ ಆಂದೋಲನವನ್ನು  ಕರವೇ ವತಿಯಿಂದ ದಿನಾಂಕ 05-03-2024ರಂದು ಉಡುಪಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಕರವೇ ಕಚೇರಿಯಿಂದ ಹೊರಟು ರಸ್ತೆಯ ಅಕ್ಕ ಪಕ್ಕದ ಅಂಗಡಿ ಮುಂಗಟ್ಟುಗಳಿಗೆ ಕನ್ನಡ ನಾಮಫಲಕ ವಿಚಾರವಾಗಿ ಎಚ್ಚರಿಕೆ ನೀಡುತ್ತಾ ಕರಪತ್ರವನ್ನು ಕೊಟ್ಟು ಕರಾವಳಿ ಬೈಪಾಸ್ ಬನ್ನಂಜೆ ಮಾರ್ಗವಾಗಿ ಸಿಟಿ ಬಸ್ ಸ್ಟ್ಯಾಂಡ್ ,ಸರ್ವಿಸ್ ಬಸ್ ಸ್ಟ್ಯಾಂಡ್ ಜೋಡುಕಟ್ಟೆ ಮಾರ್ಗ ನಂತರ ಸೀದಾ ನಗರಸಭೆಗೆ ಮುತ್ತಿಗೆ ಹಾಕಲಾಯಿತು. ಈ ಸಂದರ್ಭದಲ್ಲಿ ಪೊಲೀಸರ ಬಂಧನಕ್ಕೆ ಒಳಗಾಗಿ ನಂತರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇಯ ರಾಜ್ಯಸಂಘಟನಾ ಕಾರ್ಯದರ್ಶಿಯಾದ ವೆಂಕಟೇಶ್ ಹೆಗಡೆಯವರು ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ರಾಜ್ಯಾದ್ಯಂತ ಸುಗ್ರೀವಾಜ್ಞೆ ಜಾರಿಗೆ ತಂದು ಅಂಗಡಿ ಮುಂಗಟುಗಳಲ್ಲಿ ಶೇಕಡ 60 ಭಾಗ ಕನ್ನಡಕ್ಕೆ ಮೀಸಲಿಟ್ಟಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಆಂಗ್ಲ ಮಾಧ್ಯಮ ನಾಮಫಲಕಗಳು ರಾರಾಜಿಸುತಿವೆ . ಆದ್ದರಿಂದ ಕೂಡಲೇ ಅಧಿಕಾರಿಗಳು ಎಸಿ ರೂಮ್ ನಿಂದ ಆಚೆ ಬಂದು ಅಂಗಡಿ ಮಾಲಕರುಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.

    ಉಡುಪಿ ಕರವೇ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಅವರು ಮಾತನಾಡಿ ಈ ಹಿಂದೆಯೂ ಕೂಡ ನಾವು ಸಂಘಟನೆಯ ಮೂಲಕ ಅನೇಕ ಬಾರಿ ನಗರ ಸಭಾ ಆಯುಕ್ತರಿಗೆ ಮನವಿಯನ್ನು ಕೊಟ್ಟಿದ್ದೇವೆ. ಮತ್ತು ಈ ದಿನ ರಾಜ್ಯಾಧ್ಯಕ್ಷರ ಆದೇಶದಂತೆ ಉಡುಪಿಯ ಪ್ರತಿ ಅಂಗಡಿ ಮುಂಗಟ್ಟುಗಳಿಗೂ ಕರಪತ್ರಗಳನ್ನು ಕೊಡುವುದರ ಮೂಲಕ ಕೂಡಲೇ 60 ಶೇಕಡ ಭಾಗ ಕನ್ನಡ ನಾಮಫಲಕವನ್ನು ಅಂಗಡಿ ಮುಂಗಟ್ಟುಗಳು ಅಳವಡಿಸಬೇಕೆಂದು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ನಾಮಫಲಕ ಅಳವಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರತರದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು .

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗೀತಾ ಪಾಂಗಾಳ, ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ ಕುಲಾಲ್. ಕಾರ್ಯದರ್ಶಿ ಸಿದ್ದಣ್ಣ ಪೂಜಾರಿ. ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ. ಜಿಲ್ಲಾ ಸಹ ಕಾರ್ಯದರ್ಶಿ ಗಣೇಶ್, ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ  ಶ್ರೀ ಗೋಪಾಲ.ಜಿಲ್ಲಾ ಮಹಿಳಾ ಉಪಾಧ್ಯಕ್ಷರು ದೇವಕಿ ಬಾರ್ಕೂರು. ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಜ್ಯೋತಿ. ಜಿಲ್ಲಾ ಮಹಿಳಾ ಕಾರ್ಯದರ್ಶಿ ಮೋಹಿನಿ ಮತ್ತು ಚಂದ್ರಕಲಾ. ಜಿಲ್ಲಾ ಮಹಿಳಾ ಸಹ ಸಂಘಟನಾ ಕಾರ್ಯದರ್ಶಿ ಜ್ಯೋತಿ ಆರ್. ಉಡುಪಿ ಮಹಿಳಾ ತಾಲೂಕು ಅಧ್ಯಕ್ಷರಾದ ಹೆಲನ್. ಕಾಪು ಮಹಿಳಾ ತಾಲೂಕು ಅಧ್ಯಕ್ಷರಾದ ಶಶಿಕಲ ನವೀನ್. ಉಡುಪಿ ಮಹಿಳಾ ತಾಲೂಕು ಮಹಿಳಾ ಉಪಾಧ್ಯಕ್ಷರಾದ ಪವಿತ್ರ ಶೆಟ್ಟಿ. ಉಪಾಧ್ಯಕ್ಷರು ಶಾಲಿನಿ ಸುರೇಶ್ ಹಾಗೂ ಉಡುಪಿ ಜಿಲ್ಲಾ ಪುರುಷ ಮತ್ತು ಮಹಿಳಾ ಜಿಲ್ಲಾ ಹಾಗೂ ತಾಲೂಕು ಸರ್ವ ಸದಸ್ಯರು ಉಪಸ್ಥಿತರಿದ್ದರು.

error: No Copying!