Spread the love

ಬೆಂಗಳೂರು: ದಿನಾಂಕ:05-03-2024(ಹಾಯ್ ಉಡುಪಿ ನ್ಯೂಸ್) ಮುಖ್ಯಮಂತ್ರಿ, ಉಪಮುಖ್ಯಮಂತ್ರಿ,ಗ್ರಹಸಚಿವರಿಗೆ ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ” ದಿ ರಾಮೇಶ್ವರಂ ಕೆಫೆ” ಬಾಂಬ್ ಸ್ಫೋಟದ ರೀತಿಯಲ್ಲಿ ಬಸ್ ನಿಲ್ದಾಣ , ರೈಲು ನಿಲ್ದಾಣ ಹಾಗೂ ಇತರೆಡೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆಯ ಈ ಮೇಲ್ ಸಂದೇಶ ಬಂದಿದೆ.

ಈ ಮೇಲ್ ಸಂದೇಶ ಕಳುಹಿಸಿದವರು 20 ಕೋಟಿ ಹಣದ ಬೇಡಿಕೆ ಇಟ್ಟಿದ್ದು; ಕೊಡದಿದ್ದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಬಾಂಬ್ ಬೆದರಿಕೆ ಸಂಬಂಧ ಸಿ.ಸಿ.ಬಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.

error: No Copying!