ಕಾರ್ಕಳ: ದಿನಾಂಕ 04/03/2024 (ಹಾಯ್ ಉಡುಪಿ ನ್ಯೂಸ್) ಸುವರ್ಣ ನದಿಯಿಂದ ಮರಳು ಕದ್ದು ಸಾಗಾಣಿಕೆ ನಡೆಸುತ್ತಿದ್ದ ಟಿಪ್ಪರ್ ಹಾಗೂ ಚಾಲಕನನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಲೋಲಾಕ್ಷ ಕೆ ಅವರು ಬಂಧಿಸಿದ್ದಾರೆ.
ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಹೆರಂಜೆ ಎಂಬಲ್ಲಿ ಸುವರ್ಣ ನದಿಯ ಸರಕಾರಿ ಸ್ಥಳದಲ್ಲಿ ಮರಳನ್ನು ಕಳವು ಮಾಡಿಕೊಂಡು ಯಾವುದೇ ಪರವಾನಿಗೆ ಹೊಂದದೇ KA-20-C-7426 ನೇ ನಂಬ್ರದ ಟಿಪ್ಪರ ಲಾರಿಯಲ್ಲಿ ತುಂಬಿಸಿಕೊಂಡು ಹೆರಂಜೆ ಕಡೆಯಿಂದ ಎರ್ಲಪಾಡಿ ಕಡೆಗೆ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಚಾಲಕ ಆರೋಪಿ ಕರುಣಾಕರ ಎಂಬವನನ್ನು ಕಾರ್ಕಳ ನಗರ ಪೊಲೀಸ್ ಠಾಣೆ , ಪೊಲೀಸ್ ಉಪ ನಿರೀಕ್ಷಕರಾದ ಲೋಲಾಕ್ಷ ಕೆ ಅವರು ಬಂಧಿಸಿ,ಮರಳು ಸಮೇತ ಟಿಪ್ಪರ್ ಲಾರಿಯನ್ನು ಹಾಗೂ ಪ್ಲಾಸ್ಟಿಕ ಬುಟ್ಟಿ ಹಾಗೂ ಕಬ್ಬಿಣದ ಹಾರೆ ಇವುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 379 ಐಪಿಸಿ ಮತ್ತು ಕಲಂ .4(1-a),21(4) M.M.R.D ACT 1957, ಕಲಂ: 66 ಜೊತೆಗೆ 192 (ಎ) IMV ACT ರಂತೆ ಪ್ರಕರಣ ದಾಖಲಾಗಿದೆ.