Spread the love

ಕಾಪು: ದಿನಾಂಕ:03-02-2024(ಹಾಯ್ ಉಡುಪಿ ನ್ಯೂಸ್) ಲೈನ್ ಸೇಲ್ಸ್ ವಾಹನದ ಲೈನ್ ಸೇಲ್ಸ್ ಮೆನ್ ನ ಪರ್ಸ್ ನಲ್ಲಿದ್ದ ಹಣವನ್ನು ದರೋಡೆ ನಡೆಸಿದ ಘಟನೆ ಕಾಪುವಿನಲ್ಲಿ ನಡೆದಿದೆ.

ಉಡುಪಿ ನಿವಾಸಿ ಉಮೇಶ (62) ಎಂಬವರು  ನಿಟ್ಟೂರಿನ ಸುರೇಶ್‌ ಯು.ಬಿ ಎಂಬವರ ಮಾಲಕತ್ವದ ಶಕ್ತಿ ಟ್ರೇಡರ್ಸ್‌ನಲ್ಲಿ ಲೈನ್ ಸೇಲ್ಸ್‌‌ಮೆನ್ ಆಗಿ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ

ಉಮೇಶ್ ರವರು 407 ವಾಹನ ಸಂಖ್ಯೆ ಕೆಎ 20 ಎಎ 7349 ವಾಹನದಲ್ಲಿ ಸಾಮಾಗ್ರಿಗಳನ್ನು ಲೋಡ್ ಮಾಡಿಕೊಂಡು ನಿಟ್ಟೂರಿನಿಂದ ಬೈಕಂಪಾಡಿವರೆಗೆ ಅಂಗಡಿಗಳಿಗೆ ಲೈನ್ ಸೇಲ್‌ಮಾಡಿಕೊಂಡಿದ್ದು, ದಿನಾಂಕ 02/03/2024 ರಂದು ಎಂದಿನಂತೆ ಬೆಳಿಗ್ಗೆ ಸಾಮಾಗ್ರಿಗಳನ್ನು ಲೋಡ್ ಮಾಡಿಕೊಂಡು ಕಾಪು, ಉಚ್ಚಿಲ, ಪಡುಬಿದ್ರಿ, ಕಾರ್ನಡ್, ಕಿನ್ನಿಗೋಳಿ, ಬೈಕಂಪಾಡಿ ಮುಂತಾದ ಕಡೆಗಳಲ್ಲಿಲೈನ್ ಸೇಲ್ ಮಾಡಿ ಅಂಗಡಿಗಳಿಂದ ಹಣ ಸಂಗ್ರಹಿಸಿಕೊಂಡು ತನ್ನ ಬಳಿಯಿದ್ದ ಬ್ಯಾಗ್‌ನಲ್ಲಿ ಇಟ್ಟುಕೊಂಡು ವಾಪಾಸು ನಿಟ್ಟೂರಿನ ಕಡೆ ಹೋಗುತ್ತಿರುವಾಗ ಕಾಪುವಿನ ಸೌಮ್ಯ ಜನರಲ್ ಸ್ಟೋರ್‌ನ ಮಾಲಕರಾದ ವಿಠ್ಠಲ ಎಂಬವರು ಉಮೇಶ್ ರವರಿಗೆ ಕರೆ ಮಾಡಿ 15 ಕೆ.ಜಿ ಗೋಧಿ ಕಡಿ ಬೇಕು ಎಂದು ತಿಳಿಸಿದಂತೆ ಉಮೇಶ್ ರವರು ವಾಹನದಲ್ಲಿ ರಾತ್ರಿ 8:25 ಗಂಟೆ ಸುಮಾರಿಗೆ ಕಾಪು ಮಾರ್ಕೇಟ್ ಬಳಿಯಿರುವ ವಿಠ್ಠಲರವರ ಸ್ಟೋರ್ಸ್‌ಗೆ ಗಾಡಿಯಲ್ಲಿದ್ದ ತಮ್ಮ ಕೆಲಸಗಾರನಾದ ಆಶಿಷ್ ರವರ ಮುಖಾಂತರ 15 ಕೆ.ಜಿ ಗೋಧಿ ಕಡಿಯನ್ನು ಅಂಗಡಿಗೆ ಹಾಕಿಸಿ ಉಮೇಶ್ ರವರು ವಿಠ್ಠಲರವರ ಕಡೆಯಿಂದ  ಹಣವನ್ನುಪಡೆದುಕೊಂಡು ತನ್ನ ಬ್ಯಾಗ್‌ನಲ್ಲಿ ಹಾಕಿಕೊಂಡು ತಮ್ಮ 407 ವಾಹನ ನಿಂತಿದ್ದ ಹೊಸ ಮಾರಿಗುಡಿಯ ಕಡೆಗೆ ನಡೆದುಕೊಂಡು ಹೋಗುತ್ತಾ ಮಾರಿಗುಡಿ ಎದುರಿನ ಅಂಡರ್ ಪಾಸ್‌ ಕೆಳಕಡೆ ತಲುಪುವಾಗ ರಾತ್ರಿ ಸುಮಾರು 8:30 ಗಂಟೆಗೆ ಮಾರಿಗುಡಿ ಎದುರಿನ ಸರ್ವೀಸ್ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಬಂದ ಓರ್ವ ಬೈಕ್ ಸವಾರನು ಉಮೇಶ ರವರ ಬದಿಗೆ ಬಂದು ಬೈಕನ್ನು ನಿಲ್ಲಿಸಿ ಉಮೇಶ ರವರ ಕಂಕುಳಲ್ಲಿರಿಸಿದ ಹಣ ತುಂಬಿದ್ದ ಬ್ಯಾಗನ್ನು ಎಳೆದು ದರೋಡೆ ಮಾಡಿಕೊಂಡು ಅಲ್ಲಿಂದ ಮಾರ್ಕೇಟ್ಎದುರಿನ ಸರ್ವೀಸ್ ರಸ್ತೆಯಲ್ಲಿ ಉಡುಪಿ ಕಡೆಗೆ ಪರಾರಿಯಾಗಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.. ಬ್ಯಾಗಿನಲ್ಲಿ ಅಂದಾಜು ಮೌಲ್ಯ ಸುಮಾರು 1,25,000/ ಹಣವಿತ್ತೆನ್ನಲಾಗಿದೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ  ಕಲಂ: 392 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!