Spread the love

ಉಡುಪಿ: ದಿನಾಂಕ:23-02-2024(ಹಾಯ್ ಉಡುಪಿ ನ್ಯೂಸ್) ವ್ಯಕ್ತಿ ಯೋರ್ವರಿಗೆ ಪೆನ್ಶನ್ ಆರ್ಡರ್ ಮಾಡಿಕೊಡುವುದಾಗಿ ನಂಬಿಸಿ ಅಪರಿಚಿತ ನೋರ್ವ ಹತ್ತು ಲಕ್ಷ ರೂಪಾಯಿ ಗೂ ಮೇಲ್ಪಟ್ಟು  ವಂಚಿಸಿರುವುದಾಗಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

     ಉಡುಪಿಯ ಟಿ.ಜೀವನ್ (61) ಎಂಬವರು ಉಡುಪಿಯ ಮೈತ್ರಿ ಕಾಂಪ್ಲೇಕ್ಸ್ ನಲ್ಲಿರುವ ಎಸ್.ಬಿ.ಐ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

      ದಿನಾಂಕ 22/02/2024 ರಂದು  ಟಿ.ಜೀವನ್ ರವರಿಗೆ ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್  ನಿಂದ  ಕರೆ ಮಾಡಿ ತಾನು  CMPF ಧನ್‌ಭಾಗ್  ಕಚೇರಿಯಿಂದ ಕರೆ ಮಾಡುವುದಾಗಿ ತಿಳಿಸಿ  ಟಿ.ಜೀವನ್ ರವರಿಗೆ ಬರಬೇಕಾದ ಪೆನ್‌ಶನ್‌ಆರ್ಡರ್ ಮಾಡಿಕೊಡುವುದಾಗಿ ನಂಬಿಸಿ  ಟಿ.ಜೀವನ್ ರವರಿಂದ Net Banking ವಿವರ, ATM CARD ವಿವರವನ್ನು ಪಡೆದು ಟಿ.ಜೀವನ್ ರವರ ಹೆಸರಿನಲ್ಲಿ OD ಲೋನ್ ಖಾತೆಯನ್ನು ತೆರೆದು Fixed Deposit ನಲ್ಲಿರುವ ರೂ 10,20,200/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ, ಟಿ.ಜೀವನ್ ರವರಿಗೆ ನಷ್ಟ ಉಂಟು ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

      ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ  ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.   

error: No Copying!