Spread the love
  • ಕುಂದಾಪುರ: ದಿನಾಂಕ : 23-02-2024(ಹಾಯ್ ಉಡುಪಿ ನ್ಯೂಸ್) ಕಟ್ ಬೆಲ್ತೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ನಾಲ್ವರನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ನೂತನ್ ಡಿ.ಈ ಅವರು ಬಂಧಿಸಿದ್ದಾರೆ.
  •      ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ನೂತನ್ ಡಿ.ಈ ಅವರು ದಿನಾಂಕ 22/02/2024 ರಂದು ಸಂಜೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಟ್‌ಬೆಲ್ತೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿರುವುದಾಗಿ ಸಾರ್ವಜನಿಕರಿಂದ ಬಂದ ಮಾಹಿತಿ  ಮೇರೆಗೆ ಕೂಡಲೇ ಸ್ಥಳಕ್ಕೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.
  •      ಪೊಲೀಸರು ದಾಳಿ ನಡೆಸಿದಾಗ ಕೋಳಿ ಅಂಕ ಜುಗಾರಿ ಆಟಕ್ಕೆ ಸುತ್ತುವರಿದು ನಿಂತಿದ್ದ ಜನರು ಓಡಿ ಹೋಗಿದ್ದು, ಸಿಬ್ಬಂದಿಗಳ ಸಹಾಯದಿಂದ ಕೋಳಿ ಅಂಕ ಜುಗಾರಿ ಆಟದಲ್ಲಿ ನಿರತರಾದವರನ್ನು ಸುತ್ತುವರಿದು 1. ನಾಗರಾಜ ,2. ಜನಾರ್ಧನ, 3. ಅನಿಲ್, 4. ಮನೋಜ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
  •      ಆಪಾದಿತರ ವಶದಲ್ಲಿದ್ದ ಕೋಳಿ ಅಂಕಕ್ಕೆ ಬಳಸಿದ 3 ಜೀವಂತ ಕೋಳಿ, ಕೋಳಿ ಬಾಳು, ಕೋಳಿಯ ಕಾಲಿಗೆ ಬಾಳುಕಟ್ಟಲು ಉಪಯೋಗಿಸಿದ ಹಗ್ಗ ಹಾಗೂ ಆಟಕ್ಕೆ ಉಪಯೋಗಿಸಿದ ನಗದು 2100/- ರೂಪಾಯಿಯನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
  •     ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ: 87, 93 KP Act & 11 (1) (A) Animal Cruelty Act ರಂತೆ ಪ್ರಕರಣ ದಾಖಲಾಗಿದೆ.

error: No Copying!