ಉಡುಪಿ: ದಿನಾಂಕ:18-02-2024(ಹಾಯ್ ಉಡುಪಿ ನ್ಯೂಸ್) ಚಿಟ್ಪಾಡಿ ನಿವಾಸಿ ಸದಾನಂದ ಎಂಬವರ ಗೂಡಂಗಡಿಗೆ ಕಳ್ಳರು ನುಗ್ಗಿ ಅಂಗಡಿಯಲ್ಲಿದ್ದ ವಸ್ತುಗಳನ್ನೆಲ್ಲ ಕಳ್ಳತನ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ,ಚಿಟ್ಪಾಡಿ ನಿವಾಸಿ ಸದಾನಂದ (67) ಎಂಬವರು ಚಿಟ್ಪಾಡಿ ಗಜಾನನ ಹೋಟೆಲ್ ಬಳಿ ಗೂಡಂಗಡಿಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ಸದಾನಂದ ಅವರು ದಿನಾಂಕ:17/02/2024 ರಂದು ರಾತ್ರಿ ಕೆಲಸ ಮುಗಿಸಿ ಗೂಡಂಗಡಿ ಬಂದ್ ಮಾಡಿ ಮನೆಗೆ ಹೋಗಿದ್ದು, ದಿನಾಂಕ :18/02/2024 ರಂದು ಬೆಳಿಗ್ಗೆ 09:00 ಗಂಟೆಗೆ ಅಂಗಡಿಗೆ ಬಂದು ನೋಡಿದಾಗ ಯಾರೋ ಕಳ್ಳರು ಗೂಡಂಗಡಿಯ ಒಂದು ಬಾಗಿಲಿನ ಚಿಲಕಗಳನ್ನು ಮುರಿದಿದ್ದು, ಅಂಗಡಿಯ ಒಳಗೆ ಇದ್ದ ಬಿಸ್ಕೇಟ್ , ಚಾಕ್ಲೇಟ್ ಬಾಕ್ಸ್, ದೇವರ ಪೂಜೆಗೆ ಬಳಸುವ ವಸ್ತುಗಳು , ತಿಂಡಿ –ತಿನಿಸುಗಳು ಹಾಗೂ ಇತರೇ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ವಸ್ತುಗಳ ಮೌಲ್ಯ 16,000/- ರೂಪಾಯಿ ಆಗಿರುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 457,380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.