ಗಂಗೊಳ್ಳಿ: ದಿನಾಂಕ 16/02/2024 (ಹಾಯ್ ಉಡುಪಿ ನ್ಯೂಸ್) ಗಂಗೊಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಹಾಡಿ ಯೊಂದರಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಮೂವರನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಬಸವರಾಜ ಶೆಟ್ಟಿ ಯವರು ಬಂಧಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಬಸವರಾಜ ಶೆಟ್ಟಿ ಅವರಿಗೆ ದಿನಾಂಕ: 16-02-2024/ರಂದು ಗಂಗೊಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ದಾಳಿ ನಡೆಸಿದಾಗ ಸಾರ್ವಜನಿಕ ಸ್ಥಳವಾದ ಹಾಡಿಯಲ್ಲಿ ಜನರು ಗುಂಪು ಕಟ್ಟಿಕೊಂಡಿದ್ದು, ಇಬ್ಬರು 2 ಕೋಳಿ ಹುಂಜಗಳ ಕಾಲಿಗೆ ಕೋಳಿ ಬಾಳನ್ನು ಕಟ್ಟಿ ಹಿಂಸಾತ್ಮಕವಾಗಿ ಜೂಜಾಟಕ್ಕೆ ಬಿಟ್ಟಿದ್ದು, ಉಳಿದವರು ಸುತ್ತುವರಿದು ತಮ್ಮ ಕೋಳಿಗಳನ್ನು ನೈಲಾನ್ ಹಗ್ಗದ ತುಂಡುಗಳಿಂದ ಗಿಡಗಳಿಗೆ ಕಟ್ಟಿ, ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ ನಡೆಸುತ್ತಿದ್ದವರನ್ನು ಸಿಬ್ಬಂದಿಯವರ ಜೊತೆಯಲ್ಲಿ ಸುತ್ತುವರಿದು ಆಪಾದಿತರಾದ ದಿನೇಶ, ಉದಯ , ದೇವೇಂದ್ರ ಎಂವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು, ಉಳಿದವರು ಓಡಿ ಹೋಗಿರುತ್ತಾರೆ ಎನ್ನಲಾಗಿದೆ.
ದಾಳಿಯಲ್ಲಿ ಕೋಳಿ ಅಂಕ ಜುಗಾರಿ ಆಟಕ್ಕೆ ಬಳಸಿದ ಕೋಳಿ ಹುಂಜ – 8, ಕೋಳಿ ಬಾಳು -2, ಕಪ್ಪು ಬಣ್ಣದ ದಾರ, ಕೋಳಿಗಳನ್ನು ಗಿಡಗಳಿಗೆ ಕಟ್ಟಲು ಉಪಯೋಗಿಸಿದ ನೈಲಾನ್ ಹಗ್ಗದ ತುಂಡು ಹಾಗೂ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿದ್ದ ನಗದು ಹಣ 500/- ರೂಪಾಯಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ: 11 (1)(ಎ) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ 1960, ಕಲಂ: 87-93 ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.