- ಶಂಕರನಾರಾಯಣ: ದಿನಾಂಕ:16-02-2024(ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಮೂವರನ್ನು ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಅವರು ಬಂಧಿಸಿದ್ದಾರೆ.
- ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಅವರಿಗೆ ದಿನಾಂಕ 15/02/2024 ರಂದು ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
- ಸಾರ್ವಜನಿಕ ಸ್ಥಳದಲ್ಲಿ ಜನರ ಗುಂಪು ಸೇರಿಸಿ ಕೊಂಡು ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಆಪಾದಿತರಾದ ಶಿವರಾಮ, ಉದಯ, ಸುಧೀರ್ ಎಂಬವರನ್ನು ಬಂಧಿಸಿದ್ದಾರೆ .
- ಕೋಳಿ ಅಂಕಕ್ಕೆ ಉಪಯೋಗಿಸಿದ ಪೆಟ್ಟಾಗಿ ಗಾಯವಾಗಿದ್ದ ಕಂದು-ಕಪ್ಪು ಬಿಳಿಗೆರೆ ಮಿಶ್ರಿತ ಬಣ್ಣದ ಹಾಗೂ ಕೆಂಪು ಕಪ್ಪು ಬಣ್ಣದ ಕೋಳಿ ಹಾಗೂ ಆರೋಪಿಗಳ ಬಳಿ ಇದ್ದ 1,500/- ರೂಪಾಯಿ ಹಣವನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ .ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 11 (1)(ಎ) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ 1960, ಕಲಂ: 87-93 ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.