ಮಲ್ಪೆ: ದಿನಾಂಕ 15/02/2024 (ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಯುವಕನನ್ನು ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುಷ್ಮಾ ಜಿ ಭಂಡಾರಿ ಅವರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಸುಷ್ಮಾ ಜಿ ಭಂಡಾರಿ ಅವರು ದಿನಾಂಕ: 12-02-2024ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅಮಲುಭರಿತನಾಗಿ ತೂರಾಡುತ್ತಿರುವಂತೆ ಕಂಡು ಬಂದಿದ್ದು ಪೊಲೀಸರು ಅವನ ಬಳಿ ಹೋಗಿ ಅವನ ಹೆಸರು ಕೇಳಿದಾಗ ಅವನು ತೊದಲುತ್ತಾ ಸರದಾರ್ ನದಿಂ ಅಹಮ್ಮದ್ (27) ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
ಅವನು ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ಬಂಧಿಸಿ ವೈದ್ಯಕೀಯ ತಪಾಸಣೆ ಬಗ್ಗೆ ಪ್ರೊಫೆಸರ್ ಅಂಡ್ ಹೆಡ್ ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು ಆತನನ್ನು ಪರೀಕ್ಷಿಸಿದ ವೈದ್ಯರು ಆತ ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುತ್ತಾರೆ ಎನ್ನಲಾಗಿದೆ .
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 27(b) NDPS ACT ರಂತೆ ಪ್ರಕರಣ ದಾಖಲಾಗಿದೆ.